ಮಂಗಳೂರು: ಸುಹಾನ್ ಶೆಟ್ಟಿ ಕೊಲ್ ಬಳಿಕ ಮಂಗಳೂರಿನಲ್ಲಿ ಪ್ರತಿಕಾರದ ಬೆದರಿಕೆಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮುಖಂಡರು ಕೊಲ್ಲುವ ಬೆದರಿಕೆಗಳು ಹೆಚ್ಚುತ್ತಿವೆ. ಇದರಿಂದಾಗಿ ಪೊಲೀಸರು ಅಲರ್ಟ್ ಆಗಿದ್ದು, ಕಟ್ಟೆಚ್ಚರಕ್ಕೆ ಸೂಚಿಸಿದ್ದಾರೆ.
ಮಂಘಳೂರಿನಲ್ಲಿ ರಾತ್ರಿ 9:30ರೊಳಗೆ ಎಲ್ಲಾ ಅಂಗಡಿಗಳು, ಹೋಟೆಲ್, ಮಳಿಗೆ, ಬಾರ್ ಗಳನ್ನು ಮುಂಚ್ಚುವಂತೆ ಆದೇಶ ಹೊರಡಿಸಲಾಗಿದೆ.
ರಾತ್ರಿ 9:30ಕ್ಕೆ ಭರತ್ ಕುಮ್ಡೇಲ್ ನನ್ನು ಕೊಲ್ಲುವುದಾಗಿ ಸಂದೇಶ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕಟ್ಟ್ಟೆಚ್ಚರ ಕೈಗೊಂಡಿದ್ದಾರೆ. ರಾತ್ರಿ 9:30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್, ಬಾರ್ ಗಳನ್ನು, ಫುಟ್ ಪಾತ್ ಮೇಲಿನ ವ್ಯಾಪಾರವನ್ನು ಬಂದ್ ಮಾಡಿಸಲಾಗಿದೆ. ಜನರು ಬೇಗನೆ ಮನೆಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಮಂಗಳೂರಿನಲ್ಲಿ ಇನ್ನೂ ಕೆಲದಿನಗಳವರೆಗೆ ಇದೇ ರೀತಿ ಮುನ್ನೆಚ್ಚರಿಕೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.