ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್ ಗೋಡೆಯಲ್ಲಿ ತಲೆಕೆಳಗಾಗಿ ನೇತಾಡಿದ ಮಹಿಳೆ: ನೆರೆ ಮನೆಯವನಿಂದಲೇ ಬೈಕ್ ಸವಾರನ ಕೊಲೆಗೆ ಯತ್ನ

ಮಂಗಳೂರು: ಬೈಕ್ ನ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿಹೊಡೆದಿದ್ದು, ಇದೇ ವೇಳೆ ಎದುರಿನಿಂದ ಬರುತ್ತಿದ್ದ ಪಾದಚಾರಿ ಮಹಿಳೆಗೆ ಕಾರು ಗುದ್ದಿದ ಪರಿಣಾಮ ಮಹಿಳೆ ಕಾಂಪೌಂಡ್ ಗೋಡೆಯಲ್ಲಿ ತಲೆಕೆಳಗಾಗಿ ಸಿಲುಕಿ ನೇತಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಬಿಜೈ ಕಾಪಿಕಾಡ್ 6ನೇ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ನೆರೆ ಮನೆಯ ವ್ಯಕ್ತಿಯನ್ನು ಕೊಲ್ಲಲು ಕಾರು ಚಾಲಕ ಯತ್ನಿಸಿ ಕಾರು ಡಿಕ್ಕಿ ಹೊಡೆದಿದ್ದಾನೆ. ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಪಾದಚಾರಿ ಮಹಿಳೆಗೆ ಕಾರು ಗುದ್ದಿದೆ. ಮಹಿಳೆ ಆರು ಅಡಿ ಎತ್ತರಕ್ಕೆ ಹಾರಿ ಕಾಂಪೌಂಡ್ ಗೋಡೆಯಲ್ಲಿ ತಲೆಕೆಳಗಾಗಿ ನೇತಾಡಿದ್ದಾಳೆ. ತಕ್ಷಣ ಸ್ಥಳೀಯರು ಬಂದು ಮಹಿಳೆಯನ್ನು ರಕ್ಷಿಸಿ ಕೆಳಗಿಳಿಸಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರನು ಗಾಯಗೊಂಡಿದ್ದಾನೆ.

ಗಾಯಾಳು ಬೈಕ್ ಸವಾರ ಮುರಳಿ ಪ್ರಸಾದ್, ತಮ್ಮ ನೆರೆ ಮನೆಯ ವ್ಯಕ್ತಿ ನಿವೃತ್ತ ಬಿಎಸ್.ಎನ್.ಎಲ್ ಉದ್ಯೋಗಿ ಸತೀಶ್ ಕುಮಾರ್, ನನ್ನ ಜೊತೆ ಮೊದಲಿನಿಂದ ದ್ವೇಷ ಸಾಧಿಸುತ್ತಾ ಜಗಳವಾಡುತ್ತಿದ್ದರು. ಈಗ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read