BREAKING: ಮಂಡ್ಯದಲ್ಲಿ ಜಾನುವಾರುಗಳ ಮಾರಣ ಹೋಮ; ಗುಜರಿ ಹೆಸರಲ್ಲಿ ಅಕ್ರಮ ದಂಧೆ ಬಯಲು ಮಾಡಿದ ಬಜರಂಗದಳ ಕಾರ್ಯಕರ್ತರು

ಮಂಡ್ಯ: ಮಂಡ್ಯದಲ್ಲಿ ಇತ್ತೀಚೆಗೆ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಮಾರಣ ಹೋಮ ನಡೆದಿದೆ.

ಗುಜರಿ ಹೆಸರಲ್ಲಿ ಅಕ್ರಮ ದಂಧೆ ನಡೆಸಲಾಗುತ್ತಿರುವ ಬಗ್ಗೆ ಬಜರಂಗ ದಳ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಜಾನುವಾರುಗಳನ್ನು ಕೊಂದು ಮೂಳೆ, ಮಾಂಸ ಸಂಗ್ರಹ ಮಾಡಿಟ್ಟಿದ್ದ ಅಕ್ರಮ ಗೋದಾಮು ಶೆಡ್ ಪತ್ತೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ತೂಬಿನಕೆರೆ ಹೊರವಲಯದ ಜಮೀನಿನಲ್ಲಿ ಗೋದಾಮೊಂದರಲ್ಲಿ ಇಂಥದ್ದೊಂದು ದುಷ್ಕೃತ್ಯವೆಸಗಾತ್ತಿದೆ. ವಾರದ ಹಿಂದೆ ಗುಜರಿ ಕೆಲಸಕ್ಕೆಂದು ಗೋದಾಮು ಬಾಡಿಗೆ ಪಡೆಯಲಾಗಿತ್ತು. ಆದರೆ ಗೋದಾಮಿನ ಸುತ್ತಮುತ್ತ ಕೊಳೆತ ವಾಸನೆ ಹೆಚ್ಚುತ್ತಿದ್ದಂತೆ ಸ್ಥಳೀಯರಿಗೆ ಅನುಮಾನ ಶುರುವಾಗಿದೆ. ಬಜರಂಗದಳ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನೂರಾರು ದನಗಳ ಮಾರಣ ಹೋಮ ಮಾಡಲಾಗಿದ್ದು, ದನಗಳ ಮಾಂಸ, ಮೂಳೆ ಸಂಗ್ರಹಿಸಿರುವುದು ಪತ್ತೆಯಾಗಿದೆ. ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read