BREAKING: ಕೊನೆಗೂ ಪ್ರಗತಿಪರರ ಒತ್ತಡಕ್ಕೆ ಮಣಿದ ಸರ್ಕಾರ, ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊಟ್ಟೆ ವಿತರಣೆ

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊಟ್ಟೆ ವಿತರಿಸಲಾಗಿದೆ. ಸಾರ್ವಜನಿಕರಿಗೆ ನೀಡುತ್ತಿರುವ ರಾತ್ರಿ ಊಟದ ಜೊತೆಗೆ ಮೊಟ್ಟೆ ವಿತರಿಸಲಾಗಿದೆ.

ಈ ಮೂಲಕ ಪ್ರಗತಿಪರ ಹೋರಾಟಕ್ಕೆ ಮಣಿದ ಸರ್ಕಾರ, ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಂದ ಊಟದಲ್ಲಿ ಮೊಟ್ಟೆ ವಿತರಿಸಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ಕೂಡ ಬಡಿಸಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದರು. ಶನಿವಾರ ಮನೆಯಿಂದ ಮಾಂಸಾಹಾರ ತಂದು ಸಮ್ಮೇಳನದ ಸ್ಥಳದಲ್ಲಿ ಊಟ ಮಾಡಿದ ಪ್ರಗತಿಪರರು ಭಾನುವಾರ ಸಮ್ಮೇಳನಕ್ಕೆ ಬಂದವರಿಗೆ ಬಾಡೂಟ ವಿತರಿಸಿದ್ದರು. ಇದೀಗ ರಾತ್ರಿ ಊಟದಲ್ಲಿ ಮೊಟ್ಟೆ ವಿತರಿಸಲಾಗಿದೆ.

ಬಾಡೂಟ ನೀಡದಿದ್ದರೆ ಮೊಟ್ಟೆಯನ್ನಾದರೂ ವಿತರಿಸಬೇಕೆಂದು ಪಟ್ಟು ಹಿಡಿದಿದ್ದ ಪ್ರಗತಿಪರರು ಭಾನುವಾರ ಮಧ್ಯಾಹ್ನ ಮೊಟ್ಟೆ, ಚಿಕನ್ ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ವಿತರಿಸಿದ್ದರು. ಸಮ್ಮೇಳನದ ಸ್ಥಳದಲ್ಲಿ ಬಾಡೂಟ ವಿತರಿಸುವಾಗ ಪ್ರಗತಿಪರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read