ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿಯೇ ಯುವ ಜನತೆ ಮದುವೆಯಾಗುತ್ತಿದ್ದಾರೆ ಎನ್ನುವ ಮಟ್ಟಿಗೆ ಈ ಟ್ರೆಂಡ್‌ನ ಹುಚ್ಚು ಆವರಿಸಿದೆ.
ಏನಾದರೊಂದು ವಿಶೇಷವಾದ ಥೀಂನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆಯಬೇಕೆಂದು ಮದುಮಕ್ಕಳು ಹಾಗೂ ಛಾಯಾಗ್ರಾಹಕರ ತಂಡಗಳು ಕೆಲವೊಂದು ವಿಪರೀತದಾಟಗಳಿಗೂ ಇಳಿಯಲು ಆರಂಭಿಸಿವೆ.
ಯುವತಿಯೊಬ್ಬಳ ಮನೆಯಂಗಳದಲ್ಲಿ ಹಾವು ಕಾಣಿಸಿಕೊಂಡು, ಆಕೆ ಉರಗ ತಜ್ಞರನ್ನು ಕರೆಸುತ್ತಾಳೆ. ಸ್ಥಳಕ್ಕೆ ಧಾವಿಸುವ ಉರಗ ತಜ್ಞ ಹಾವನ್ನು ಹಿಡಿದು ಡಬ್ಬದಲ್ಲಿ ಹಾಕಿಕೊಂಡು, ತನಗೆ ಕರೆ ಮಾಡಲು ತಿಳಿಸಿ ಆತನ ಫೋನ್ ನಂಬರ್ ಕೊಡುತ್ತಾನೆ. ಇಬ್ಬರ ನಡುವೆ ಫೋನ್ ಕರೆಯಲ್ಲೇ ಆಪ್ತತೆ ಬೆಳೆದು ಪ್ರೇಮಾಂಕುರವಾಗುತ್ತದೆ…….. ಹೀಗೊಂದು ಎಳೆಯನ್ನು ತೋರಿ ಈ ಪೋಟೋ ಶೂಟ್ ಮಾಡಲಾಗಿದೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ಫೋಟೋ ಶೂಟ್ ನೋಡಿದ ನೆಟ್ಟಿಗರು, “ಈ ಮಟ್ಟದಲ್ಲೂ ವಿಚಿತ್ರ ಕಲ್ಪನೆಗಳುಂಟೇ..?” ಎಂದು ಅರ್ಥದಲ್ಲಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.
Pre Wedding Photoshoot ❤️
A Thread: 🧵 pic.twitter.com/8vXpgTRMNK
— vi (@oyevivekk) May 27, 2023
— vi (@oyevivekk) May 27, 2023
— vi (@oyevivekk) May 27, 2023