ದಿನದ 24 ತಾಸು ದುಡಿದರೂ ಕೆಲಸ ಕಳೆದುಕೊಂಡ ಉದ್ಯೋಗಿ….! ನೋವಿನ ಕಥೆ ಹಂಚಿಕೊಂಡ ಯುವಕ

ತಾವು ಕೆಲಸ ಮಾಡುವ ಕಂಪನಿಗಳಿಗೆ ವರ್ಷಗಟ್ಟಲೇ ನಿಯತ್ತಾಗಿ ದುಡಿದರೂ ಸಹ ಕೆಲಸ ಕಳೆದುಕೊಳ್ಳುವ ಮಂದಿಯ ಹತಾಶೆಯ ಕಥೆಗಳನ್ನು ಬಹಳಷ್ಟು ನೋಡಿದ್ದೇವೆ. ತನ್ನ ಕಂಪನಿಗಾಗಿ ದಿನವಿಡೀ ಲಭ್ಯವಿದ್ದ ಕೆಲಸ ಮಾಡಿದರೂ ತನ್ನನ್ನು ಫೈರ್‌ ಮಾಡಲ್ಪಟ್ಟ ಉದ್ಯೋಗಿಯೊಬ್ಬರು ತಮ್ಮ ಕಥೆಯನ್ನು ಲಿಂಕ್ಡಿನ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಬೈಜೂಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆರ್ಪಿತ್‌ ಸಿಂಗ್‌ಗೆ ತಮ್ಮ ಕೆಲಸವನ್ನು ಬಿಡುವಂತೆ ಬಲವಂತ ಮಾಡಲಾಗಿದೆ. ತಮ್ಮ ಇಡೀ ಸಮಯವನ್ನು ಕಂಪನಿಗಾಗಿ ಮುಡಿಪಿಟ್ಟು ಕೆಲಸ ಮಾಡಿದರೂ ಹೀಗೆ ಶಾಕಿಂಗ್ ಆಗಿ ಕೆಲಸ ಕಳೆದುಕೊಂಡ ವಿಚಾರವಾಗಿ ಹೇಳಿಕೊಂಡ ಆರ್ಪಿತ್‌, “ಲೇಆಫ್‌ಗಳ ಕಾರಣದಿಂದ ನಾನು ನನ್ನ ಕೆಲಸ ಕಳೆದುಕೊಂಡೆ. ನಾನು ಎಂದಿಗೂ 10ರಿಂದ 8 ಗಂಟೆ ಎಂಬ ಸಿದ್ಧಾಂತಕ್ಕೆ ಅಂಟಿಕೊಳ್ಳದೇ ಬೈಜೂಸ್‌ಗಾಗಿ ಕಷ್ಟಪಟ್ಟು ದುಡಿದೆ. ನನ್ನ ಕಂಪನಿಗಾಗಿ ನಾನು 24/7 ಲಭ್ಯವಿದ್ದೆ. ಆದರೆ ಅವರು ಇದ್ದಕ್ಕಿದ್ದಂತೆ ನನ್ನ ಬಳಿ ಬಂದು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ,” ಎಂದು ಕೆಲಸ ಕಳೆದುಕೊಂಡ ವ್ಯಕ್ತಿ ಬರೆದಿದ್ದಾರೆ.

ಸರ್ಕಾರೀ ಕೆಲಸಕ್ಕೆ ಹುಡುಕಿ ಅಲ್ಲಿ ಕೆಲಸ ಸಿಗದೇ ಖಾಸಗಿ ಕ್ಷೇತ್ರಕ್ಕೆ ಬಂದಿದ್ದಾಗಿ ಹೇಳಿಕೊಳ್ಳುವ ಆರ್ಪಿತ್‌, “ತಿಂಗಳ ಹಿಂದೆ ನಾನು ಕೆಲಸ ಕಳೆದುಕೊಂಡೆ ಎಂದು ನನ್ನ ಕುಟುಂಬಕ್ಕೆ ತಿಳಿಸಲು ಭಯವಾಗುತ್ತದೆ. ನನ್ನ ಕುಟುಂಬಕ್ಕೆ ನಾನೊಬ್ಬನೇ ಆಸರೆಯಾಗಿದ್ದೇನೆ,” ಎಂದು ತಿಳಿಸಿದ ಆರ್ಪಿತ್‌, ಇದಾದ ಬಳಿಕ ಸಾಕಷ್ಟು ಕಂಪನಿಗಳಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸುತ್ತಿದ್ದರೂ ಸಹ ತಮಗೆ ಒಂದೇ ಒಂದು ಕೆಲಸ ಸಿಕ್ಕಿಲ್ಲ ಎಂದಿದ್ದಾರೆ.

ತಾವು ಯಾವುದೇ ಕೆಲಸ ಮಾಡಲು ಸಿದ್ಧವೆನ್ನುವ ಆರ್ಪಿತ್‌, ರಜೆ ತೆಗೆದುಕೊಳ್ಳದೆಯೇ ಕೆಲಸ ಮಾಡಲು ಓಕೆ ಎನ್ನುತ್ತಾರೆ.

ಆರ್ಪಿತ್‌ರ ಈ ಪರಿಸ್ಥಿತಿಗೆ ಮರುಕ ತೋರಿರುವ ಲಿಂಕ್ಡಿನ್ ಬಳಕೆದಾರರು, ತಮ್ಮ ರೆಸ್ಯೂಮೆಯನ್ನು ಶೇರ್‌ ಮಾಡಲು ಕಾಮೆಂಟ್ ಸೆಕ್ಷನ್‌ನಲ್ಲಿ ಕೇಳಿಕೊಂಡಿದ್ದಾರೆ.

LinkedIn-Viral-Biju39s-Layoff

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read