ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬರೋಬ್ಬರಿ 26 ವರ್ಷಗಳ ಬಳಿಕ ಅರೆಸ್ಟ್…!

ಕಳೆದ 26 ವರ್ಷಗಳಿಂದ ವಂಚನೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ 47 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಅಹ್ಮದ್​ ನಗರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಅಂಟಾಪ್ ಹಿಲ್ ಪ್ರದೇಶದಲ್ಲಿ 1997 ರಲ್ಲಿ ಸರ್ಕಾರಿ ಯೋಜನೆಯಡಿ ಸಾಲ ಪಡೆಯುವ ನೆಪದಲ್ಲಿ ಮಹಿಳೆಗೆ 5 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ಭೌಸಾಹೇಬ್ ತಿಜೋರೆ ತಲೆಮರೆಸಿಕೊಂಡಿದ್ದ.

ಈ ದೂರಿನ ಆಧಾರದ ಮೇಲೆ ತಿಜೋರೆಯನ್ನು ಬಂಧಿಸಲಾಗಿತ್ತು. ಅವರಿಗೆ ಜಾಮೀನನ್ನೂ ನೀಡಲಾಯಿತು. ಆದರೆ ಇದಾದ ಬಳಿಕ ಈತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ನಂತರ ತಿಜೋರೆ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿತ್ತು ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆಂಟೊಪ್ ಹಿಲ್‌ನ ಪೊಲೀಸರ ತಂಡವು ಹಲವಾರು ತಿಂಗಳುಗಳಿಂದ ತಿಜೋರ್‌ಗಾಗಿ ಹುಡುಕಾಟ ನಡೆಸುತ್ತಿದ್ದು ಇತ್ತೀಚೆಗೆ, ಆರೋಪಿಯು ತನ್ನ ಹುಟ್ಟೂರಾದ ಅಹಮದ್‌ನಗರ ಜಿಲ್ಲೆಯ ಪಥರ್ಡಿಗೆ ಭೇಟಿ ನೀಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದ್ದು ಇದನ್ನೇ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read