ಟೊರೊಂಟೊದಲ್ಲಿ ನಡೆದ ವಿಸ್ಮಯಕಾರಿ ಘಟನೆಯೊಂದರಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತಾನು ಸಾಕಿದ ಹೆಬ್ಬಾವನ್ನು ಆಯುಧವಾಗಿ ಬಳಸಿಕೊಂಡು ರಸ್ತೆಯೊಂದರಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾನೆ.
ಮೇ 10 ರಂದು ರಾತ್ರಿ 11:50 ರ ಸುಮಾರಿಗೆ ದುಂಡಾಸ್ ಸ್ಟ್ರೀಟ್ ವೆಸ್ಟ್ ರಸ್ತೆಯಲ್ಲಿ ಘಟನೆ ನಡೆದಿದೆ. ಇಬ್ಬರ ನಡುವೆ ವಾಗ್ವಾದದ ವೇಳೆ ಈ ಘಟನೆ ಜರುಗಿದೆ ಎಂದು ಟೊರೊಂಟೊ ಪೋಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಸ್ತೆಯಲ್ಲಿ ದಾಳಿಕೋರ ವ್ಯಕ್ತಿಯ ಬಳಿ ಬಂದು ಮೊದಲು ದೈಹಿಕ ಘರ್ಷಣೆಗಿಳಿದನು. ಬಳಿಕ ತನ್ನ ಹೆಬ್ಬಾವನ್ನು ಎದುರಾಳಿ ವ್ಯಕ್ತಿಯ ಮೇಲೆ ಆಕ್ರಮಣ ಮಾಡಲು ಬಳಸಿಕೊಂಡನು. ಈ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದಾಳಿಕೋರ ವ್ಯಕ್ತಿಯ ಮೇಲೆ ಹೆಬ್ಬಾವಿನೊಂದಿಗೆ ಹೊಡೆಯುವುದು, ಬಲವಂತವಾಗಿ ಬೀಸುವುದನ್ನು ತೋರಿಸುತ್ತದೆ. ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆದ ತಕ್ಷಣ ಟೊರೊಂಟೊ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಟೊರೊಂಟೊ ನಿವಾಸಿ 45 ವರ್ಷದ ಲಾರೆನಿಯೊ ಅವಿಲಾ ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆಯ ನಂತರ ಆತನನ್ನು ಕಸ್ಟಡಿಗೆ ಒಪ್ಪಿಸಲಾಗಿದೆ.
https://twitter.com/crazyclipsonly/status/1657482303906480130?ref_src=twsrc%5Etfw%7Ctwcamp%5Etweetembed%7Ctwterm%5E1657482303906480130%7Ctwgr%5E711e0f23c371053bcba61e3aeb9869c1edea9a22%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-video-man-uses-his-pet-python-as-an-attack-weapon-during-street-fight-in-canada-4035374