ವ್ಯಕ್ತಿಯೊಬ್ಬ ಲಿಫ್ಟ್ ಒಳಗೆ ಮೂತ್ರ ವಿಸರ್ಜಿಸಿ, ಅದನ್ನು ಕಾಲಿನಿಂದ ಒರೆಸಲು ಯತ್ನಿಸಿದ ಆಘಾತಕಾರಿ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಹಡಿಯೊಂದರಲ್ಲಿ ವಸ್ತುಗಳನ್ನು ಇಳಿಸಿ ಲಿಫ್ಟ್‌ಗೆ ಪ್ರವೇಶಿಸುತ್ತಾನೆ. ಲಿಫ್ಟ್ ಬಾಗಿಲು ಮುಚ್ಚಿದ ತಕ್ಷಣ ಆತ ಒಂದು ಮೂಲೆಯ ಕಡೆಗೆ ಹೋಗಿ ಯಾವುದೇ ಹಿಂಜರಿಕೆಯಿಲ್ಲದೆ ಮೂತ್ರ ವಿಸರ್ಜಿಸುತ್ತಾನೆ.
ಮತ್ತೊಂದು ಮಹಡಿಯನ್ನು ತಲುಪುವ ಸ್ವಲ್ಪ ಮೊದಲು, ಆ ಕೃತ್ಯವನ್ನು ಮರೆಮಾಚಲು ಎಂಬಂತೆ ತನ್ನ ಕಾಲಿನಿಂದ ಮೂತ್ರವನ್ನು ಲಿಫ್ಟ್ ಬಾಗಿಲಿನ ಅಂತರದ ಕಡೆಗೆ ತಳ್ಳಲು ಪ್ರಯತ್ನಿಸುತ್ತಾನೆ.
ಸಂಪೂರ್ಣ ಘಟನೆಯನ್ನು ಸ್ಪಷ್ಟವಾಗಿ ಸೆರೆಹಿಡಿದಿರುವ ಈ ದೃಶ್ಯಾವಳಿಗಳು ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದು, ಅನೇಕರು ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.
ವೀಕ್ಷಕರು ಈ ಘಟನೆಯನ್ನು ಹೇಯವೆಂದು ಖಂಡಿಸಿದ್ದು, ಸಾರ್ವಜನಿಕ ಅಸಭ್ಯತೆ ಮತ್ತು ಮೂಲಭೂತ ನೈರ್ಮಲ್ಯದ ಬಗ್ಗೆ ನಿರ್ಲಕ್ಷ್ಯದ ನಾಚಿಕೆಗೇಡಿನ ಉದಾಹರಣೆ ಎಂದು ಕರೆದಿದ್ದಾರೆ.
Bjp person using this lift as toilet
— KAMAL🔦MAKKAL🔦NEEDHI🔦MAIAM (@KAMALA___KANNAN) April 12, 2025
How cruel mind he have
This is the new india #modikaparivaar pic.twitter.com/QR7shcC8Hk