ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯ ಹೊರಗೆ 42 ವರ್ಷದ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ ವಿನಯ್ ಪಾಂಡೆ ಎಂದು ಗುರುತಿಸಲಾದ ವ್ಯಕ್ತಿ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದನಾದರೂ ಕ್ಷಣಾರ್ಧದಲ್ಲಿ ಆತನ ಪ್ರಯತ್ನವನ್ನು ತಡೆಯಲಾಯಿತು.
ವರದಿಯ ಪ್ರಕಾರ ಅವರು ಥಾಣೆಯ ಕೊಪ್ರಿ-ಪಚ್ಪಕಾಡಿ ಪ್ರದೇಶದ ಶಿವಸೇನೆ ಕಾರ್ಯಕರ್ತರಾಗಿದ್ದಾರೆ. ಸಿಎಂ ನಿವಾಸದ ಹೊರಗೆ ಬೀಡುಬಿಟ್ಟಿದ್ದ ಆರ್‌ಪಿಎಫ್ ಯೋಧರು ವಿನಯ್ ಪಾಂಡೆ ಅವರ ಆತ್ಮಹತ್ಯಾ ಪ್ರಯತ್ನದಿಂದ ಅವರನ್ನು ತಡೆದರು.
ಸಿಎಂ ನಿವಾಸದ ಹೊರಗೆ ನಡೆದ ಈ ಘಟನೆಯ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಯ್ ಪಾಂಡೆ ಆತ್ಮಹತ್ಯೆಗೆ ಯತ್ನಿಸಿದ್ದೇಕೆ ಎಂಬುದು ತಿಳಿದುಬಂದಿಲ್ಲ.
https://twitter.com/fpjindia/status/1669966283054661632?ref_src=twsrc%5Etfw%7Ctwcamp%5Etweetembed%7Ctwterm%5E1669966283054661632%7Ctwgr%5E28e07d041b8bcb8f4db2575ad4e245a3556a887e%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fthane-news-man-tries-to-die-by-suicide-outside-cm-eknath-shindes-residence