ಫೋನ್ ಕಳವು ಮಾಡಿದ್ದಾನೆಂದು ಆರೋಪಿಸಿ ನೈಜ ಮಾಲೀಕನ ಮೇಲೆಯೇ ಹಲ್ಲೆ; ಮೊಬೈಲ್‌ ನಲ್ಲಿನ ಫೋಟೋ ತೋರಿಸಿ ಯುವಕ ಬಚಾವ್‌

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ಫೋನ್ ಕಳವು ಮಾಡಿದ್ದಾರೆ ಎಂದು ತಪ್ಪಾಗಿ ಅಪವಾದ ಹೊರಿಸಿ ಜನರು ಹಲ್ಲೆ ಮಾಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯಲ್ಲಿ, ಆ ವ್ಯಕ್ತಿ ಫೋನ್ ಕಳವು ಮಾಡಿದ್ದಾರೆ ಎಂದು ಅಪವಾದ ಹೊರಿಸಿ ಜನರು ಅವನ ಮೇಲೆ ದಾಳಿ ಮಾಡಿದ್ದಾರೆ. ಅವನು ತಾನು ನಿರಪರಾಧಿ ಎಂದು ಬೇಡಿಕೊಂಡರೂ ಜನರು ಕೇಳಿಲ್ಲ.

ಕೊನೆಗೆ ಆತ ಫೋನ್‌ನಲ್ಲಿರುವ ತನ್ನ ಫೋಟೋಗಳನ್ನು ತೋರಿಸಿ ತಾನು ನಿರಪರಾಧಿ ಎಂದು ಸಾಬೀತುಪಡಿಸಿದ್ದಾನೆ. ಅಲ್ಲದೇ ಮೊಬೈಲ್‌ ಓಪನ್‌ ಮಾಡಲು ಫೇಸ್‌ ರೆಕಿಗ್ನಿಷನ್‌ ಬಳಸಿದ್ದು, ಆಗ ಜನರಿಗೆ ಮೊಬೈಲ್‌ ನ ನಿಜವಾದ ಮಾಲೀಕ ಆತನೇ ಎಂಬುದು ಮನವರಿಕೆಯಾಗಿದೆ.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ. ಜನಸಮೂಹವು ಯಾವುದೇ ಪುರಾವೆ ಇಲ್ಲದೆ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು, ಖಂಡನೀಯ ಎಂದು ಹಲವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಈ ಘಟನೆಯನ್ನು ಖಂಡಿಸಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read