ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡ್ತಿದ್ದ ಯುವತಿ ಚಿತ್ರ ಬಿಡಿಸಿ ನೀಡಿದ ವ್ಯಕ್ತಿ; ನೆಟ್ಟಿಗರ ಮನಗೆದ್ದ ಕಾರ್ಯ

ಕೆಲವೊಮ್ಮೆ ಫಲಾಪೇಕ್ಷೆಯಿಲ್ಲದೇ ಒಬ್ಬರನ್ನು ಸಂತೋಷಪಡಿಸಲು ತೋರುವ ಗೆಸ್ಚರ್ ಅತ್ಯಮೂಲ್ಯವಾದದು. ಅಂತಹ ಅತ್ಯಮೂಲ್ಯ ಗೆಸ್ಚರ್ ನಿಂದ ವ್ಯಕ್ತಿಯೊಬ್ಬರು ಗಮನ ಸೆಳೆದಿದ್ದಾರೆ. ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಚಿತ್ರ ಬಿಡಿಸಿ ಆಕೆಗೆ ನೀಡುವ ಮೂಲಕ ಯುವತಿಯ ಮೊಗದಲ್ಲಿ ನಗು ಮೂಡಿಸಿದ್ದಾರೆ.

ವ್ಯಕ್ತಿ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿದ ನಂತರ ಅವರು ಪೆಟ್ರೋಲ್ ತುಂಬುವ ಸ್ಥಳದಿಂದ ದೂರದಲ್ಲಿ ನಿಂತು ಕೆಲಸದಲ್ಲಿದ್ದ ಯುವತಿಯ ಚಿತ್ರ ಬಿಡಿಸಿದ್ದಾರೆ. ನಂತರ ಅದನ್ನು ಯುವತಿಗೆ ನೀಡಿದ್ದಾರೆ. ಚಿತ್ರ ನೋಡಿದ ನಂತರ ಆಕೆ ಖುಷಿಪಟ್ಟಿದ್ದು, ಬಹುತೇಕ ಸಂತೋಷದಿಂದ ಭಾವುಕರಾಗಿದ್ದಾರೆ.

ಈ ವಿಶೇಷ ಕ್ಷಣವನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ಧರ್ಮೇಶ್ ಹಾದಿಯಾ ಎಂದು ಗುರುತಿಸಲಾದ ಕಲಾವಿದನನ್ನು ನೆಟ್ಟಿಗರು ಪ್ರಶಂಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read