ಟ್ಯೂಷನ್‌ ಸೆಂಟರ್‌ ಮುಂದೆಯೇ ವಿದ್ಯಾರ್ಥಿಗೆ ಚಾಕು ಇರಿತ

25 ವರ್ಷದ ವ್ಯಕ್ತಿಯೊಬ್ಬ ಟ್ಯೂಷನ್ ಕೇಂದ್ರದ ಹೊರಗೆ ವಿದ್ಯಾರ್ಥಿಗೆ ಹಲವು ಬಾರಿ ಇರಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಈ ಪ್ರಕರಣ ಸಂಬಂಧ ಆರೋಪಿ ಸೇರಿದಂತೆ ಆತನ ಅಪ್ರಾಪ್ತ ಸೋದರನನ್ನು ಬಂಧಿಸಲಾಗಿದೆ.

ಆರೋಪಿಗಳು ಟ್ಯೂಷನ್ ಸೆಂಟರ್‌ನ ಹೊರಗೆ ಪದೇ ಪದೇ ಗಲಾಟೆ ಮಾಡುತ್ತಿದ್ದು, ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಕೇಂದ್ರ ನಡೆಸುತ್ತಿರುವ ಎ.ಡಿ. ಮಹೇಶ್ ಸಮಾಧಾನಪಡಿಸಲು ಮುಂದಾದಾಗ ಮಹೇಶ್ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆಯಲ್ಲಿ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.

ಆರೋಪಿ ಶಿಶುಪಾಲ್ (25) ಮಹೇಶ್ ಜೊತೆ ಜಗಳವಾಡುತ್ತಿದ್ದಾಗ ಆತನ ಕಿರಿಯ ಸಹೋದರ ಅಲ್ಲಿಗೆ ಧಾವಿಸಿ ಚಾಕುವನ್ನ ಶಿಶುಪಾಲ್ ನಿಗೆ ನೀಡಿದ್ದಾನೆ. ಚಾಕು ತೆಗೆದುಕೊಂಡು ಆತ 17 ವರ್ಷದ ವಿದ್ಯಾರ್ಥಿ ಅಭಿಷೇಕ್‌ಗೆ ಪದೇ ಪದೇ ಇರಿದಿದ್ದಾನೆ.

ಗಾಯಗೊಂಡ ವಿದ್ಯಾರ್ಥಿಗೆ ಹತ್ತಿರದ ಆಸ್ಪತ್ರೆಗಯಲ್ಲಿ ಚಿಕಿತ್ಸೆ ಕೊಡಿಸಿ ನಂತರ AIIMS ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಯಿತು.

ಪೊಲೀಸರು ಶಿಶುಪಾಲ್‌ನನ್ನು ಕರೆದೊಯ್ದು ಆತನ ಸಹೋದರನನ್ನು ಬಂಧಿಸಲು ಪ್ರಯತ್ನಿಸಿದಾಗ ಟ್ಯೂಷನ್ ಸೆಂಟರ್‌ಗೆ ಸಮೀಪವಿರುವ ಅವರ ಮನೆಯ ಮೇಲಿನಿಂದ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಪ್ರಗತಿಯಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read