Watch Video | ಕಚೇರಿಯಲ್ಲಿ ಸಣ್ಣ ನಿದ್ರೆಗೆ ಜಾರಿದ ಉದ್ಯೋಗಿ…! ಎಚ್ಚರಗೊಂಡು ನೋಡಿದಾಗ‌ ಕಾದಿತ್ತು ಶಾಕ್

Workstation, Ghosted, Viral Video, workplace, pranks, jokes, viral news, viral news today, viral new song, viral news india, viral video news, viral video, viral video dance, viral videos today, viral video funny, viral video youtube, latest viral videoಸಾಮಾನ್ಯವಾಗಿ ಕೆಲಸದ ಡೆಡ್ಲೈನ್‌ ಗಳ ಒತ್ತಡ ನಿಭಾಯಿಸುವ ಅನುಭವ ನಮ್ಮಲ್ಲಿ ಬಹುತೇಕರಿಗೆ ಆಗಿರುತ್ತದೆ. ಕೆಲವೊಮ್ಮೆ ಕಚೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಬೇಕಾಗಿ ಬರುತ್ತದೆ. ಡೆಡ್ಲೈನ್‌ಗಳು ಹಾಗೂ ಟಾರ್ಗೆಟ್‌ಗಳನ್ನು ತಲುಪಲು ನಾವು ಬಹಳಷ್ಟು ಶ್ರಮ ಪಡುತ್ತೇವೆ.

ಈ ಎಲ್ಲದರ ನಡುವೆ ಉದ್ಯೋಗಿಗಳು ಸಣ್ಣದೊಂದು ಬ್ರೇಕ್ ಪಡೆದು ಸ್ವಲ್ಪ ಉಸಿರೆಳೆದುಕೊಳ್ಳಲು ನೋಡುವುದು ಸೂಕ್ತ. ಆದರೆ ಇಲ್ಲೊಬ್ಬರು ತಮ್ಮ ಕೆಲಸದ ಒತ್ತಡ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯಲು ಹೋಗಿ ನಿದ್ರೆಗೆ ಜಾರಿಬಿಟ್ಟಿದ್ದಾರೆ.

ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾಗೇ ಸಣ್ಣದೊಂದು ತೂಕಡಿಕೆ ನೀಗಿಸಲು ಮುಂದಾದ ಈ ಉದ್ಯೋಗಿಗೆ ಸಹೋದ್ಯೋಗಿಗಳು ಸಣ್ಣದೊಂದು ಚೇಷ್ಟೆ ಮಾಡಲು ನಿರ್ಧರಿಸಿದ್ದಾರೆ. ಮೆಲ್ಲಗೆ ತಮ್ಮ ತಮ್ಮಲ್ಲೇ ಮಾತಾಡಿಕೊಂಡು ಅಲ್ಲೇ ಪಕ್ಕದಲ್ಲೆಲ್ಲೋ ಎಲ್ಲರೂ ಹೋಗಿ ಅವಿತುಕೊಂಡಿದ್ದಾರೆ.

ತೂಕಡಿಕೆಯಿಂದ ಎದ್ದ ಕೂಡಲೇ ಸುತ್ತಲೂ ಒಮ್ಮೆ ಹಾಗೇ ಕಣ್ಣಾಯಿಸಿದ ’ಸಂತ್ರಸ್ತ’ನಿಗೆ ಕಚೇರಿಯಲ್ಲಿ ಯಾರೂ ಇಲ್ಲದಿರುವುದು ಗೋಚರವಾಗಿದೆ. ಗಾಬರಿಗೊಂಡು ತನ್ನ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿದ ಈತನಿಗೆ , “ಇವತ್ತು ಭಾನುವಾರ ಅಲ್ವಾ? ಮೂವಿಯಲ್ಲಿದ್ದೀನಿ,” ಎಂಬ ಉತ್ತರ ಬಂದಿದೆ.

“ಏನು ! ಶುಕ್ರವಾರದಿಂದಲೂ ನಾನು ನಿದ್ರೆ ಮಾಡುತ್ತಲೇ ಇದ್ದೇನಾ?” ಎಂದು ಇನ್ನಷ್ಟು ಗಾಬರಿಗೊಂಡಿದ್ದಾನೆ ಈ ಸಂತ್ರಸ್ತ.

ಸಾವರಿಸಿಕೊಂಡು ವಾಶ್‌ರೂಂಗೆ ಹೋಗಿ ಬಂದ ಸಂತ್ರಸ್ತನಿಗೆ ತನ್ನ ಸುತ್ತಲೂ ಇದ್ದ ಸಹೋದ್ಯೋಗಿಗಳೆಲ್ಲಾ ತಂತಮ್ಮ ಸ್ಥಾನಗಳಲ್ಲಿ ಕುಳಿತಿದ್ದನ್ನು ಕಂಡಿದ್ದಾರೆ. ಏನಾಗಿದೆ ಎಂದು ಅರ್ಥವಾಗದೇ ಕಕ್ಕಾಬಿಕ್ಕಿಯಾದ ಈತನ ಮುಖ ಭಾವ ಕಂಡು ಸಹೋದ್ಯೋಗಿಗಳೆಲ್ಲಾ ಚೆನ್ನಾಗಿ ಮಜಾ ತೆಗೆದುಕೊಂಡಿದ್ದಾರೆ.

https://twitter.com/FunnymanPage/status/1640702639481688064?ref_src=twsrc%5Etfw%7Ctwcamp%5Etweetembed%7Ctwterm%5E1640702639481688064%7Ctwgr%5E86c580a23978a7dbdcf7fa6983f35abe2216ccff%7Ctwcon%5Es1_&ref_url=https%3A%2F%2Fwww.india.com%2Fviral%2Fman-sleeps-at-workstation-on-waking-up-realises-that-he-is-ghosted-watch-5970621%2F

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read