ಅಂಬರ್ನಾಥ್, ಮಹಾರಾಷ್ಟ್ರ: ಮಹಾರಾಷ್ಟ್ರದ ಅಂಬರ್ನಾಥ್‌ನಲ್ಲಿರುವ ಪಟೇಲ್ ಕ್ಸೆನಾನ್ ಹೌಸಿಂಗ್ ಪ್ರಾಜೆಕ್ಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಿಫ್ಟ್‌ನಲ್ಲಿ 12 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ, ಬೆದರಿಸಿ, ಕಚ್ಚಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಜುಲೈ 4 ರಂದು ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕನ ಕುಟುಂಬದವರು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಆರೋಪ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ, ವ್ಯಕ್ತಿಯೊಬ್ಬ ಲಿಫ್ಟ್ ಪ್ರವೇಶಿಸಿ ತಕ್ಷಣವೇ ಬಾಲಕನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿರುವುದು ಕಂಡುಬರುತ್ತದೆ. ಆತ ಬಾಲಕನಿಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿರುವುದು, ಬೆದರಿಸಿರುವುದು ಮತ್ತು ಅವನ ಕೈಗೆ ಕಚ್ಚಿರುವುದು ದಾಖಲಾಗಿದೆ. ಲಿಫ್ಟ್ ನೆಲಮಹಡಿಗೆ ತಲುಪಿ ಬಾಲಕ ಹೊರಬಂದ ನಂತರವೂ, ಆ ವ್ಯಕ್ತಿ ಅವನನ್ನು ಹಿಂಬಾಲಿಸಿ ಕಟ್ಟಡದ ಲಾಬಿಯಲ್ಲಿ ಹಲ್ಲೆ ಮುಂದುವರಿಸಿದ್ದಾನೆ. ಭದ್ರತಾ ಸಿಬ್ಬಂದಿ ಮತ್ತು ಇತರ ನಿವಾಸಿಗಳು ಮಧ್ಯಪ್ರವೇಶಿಸಿದ ನಂತರವಷ್ಟೇ ಹಲ್ಲೆ ನಿಂತಿದೆ.
ಸಂತ್ರಸ್ತ ಬಾಲಕನ ಪ್ರಕಾರ, 9ನೇ ಮಹಡಿಯಲ್ಲಿ ಲಿಫ್ಟ್ ನಿಂತಾಗ ಹೊರಗೆ ಯಾರೂ ಇಲ್ಲದ ಕಾರಣ ಬಾಗಿಲು ಮುಚ್ಚಿದ್ದಕ್ಕೆ ಈ ಘಟನೆ ಶುರುವಾಗಿದೆ. “ಅಂಕಲ್ ಲಿಫ್ಟ್ ಒಳಗೆ ಬಂದು ಏನೂ ಹೇಳದೆ ನನ್ನನ್ನು ಹೊಡೆಯಲು ಶುರುಮಾಡಿದರು,” ಎಂದು ಬಾಲಕ ಹೇಳಿದ್ದಾನೆ. “ಯಾಕೆ ಹೊಡೆಯುತ್ತಿದ್ದೀರಿ ಎಂದು ಕೇಳಿದಾಗ, ಅವರು ನನ್ನನ್ನು ಕಚ್ಚಿ ‘ನೀನು ನನಗೆ ಹೊರಗೆ ಸಿಗು, ನಾನು ನಿನ್ನನ್ನು ಚಾಕುವಿನಿಂದ ಇರಿದು ಸಾಯಿಸುತ್ತೇನೆ’ ಎಂದು ಬೆದರಿಸಿದರು. ಕಚ್ಚಿದಾಗ ನಾನು ಅವರನ್ನು ತಳ್ಳಿ ಹಾಕಿದೆ,” ಎಂದು ವಿವರಿಸಿದ್ದಾನೆ.
ಬಾಲಕನ ತಂದೆ ಆಕ್ರೋಶ ವ್ಯಕ್ತಪಡಿಸಿ, “ನನ್ನ ಮಗ ಕ್ಲಾಸ್‌ಗೆ ಹೋಗುತ್ತಿದ್ದ. 14ನೇ ಮಹಡಿಯಿಂದ 9ನೇ ಮಹಡಿಗೆ ಬಂದಾಗ, ಅವನ ಸ್ನೇಹಿತನ ತಂದೆ ಲಿಫ್ಟ್ ಪ್ರವೇಶಿಸಿ ನನ್ನ ಮಗನನ್ನು ಹೊಡೆಯಲು ಶುರುಮಾಡಿದ. ಲಿಫ್ಟ್ ನೆಲಮಹಡಿಗೆ ತಲುಪುವವರೆಗೂ ಹೊಡೆದ, ನಂತರ ಲಾಬಿಯಲ್ಲೂ ಹಲ್ಲೆ ಮುಂದುವರಿಯಿತು. ವಾಚ್‌ಮನ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದ. ನನ್ನ ಮಗನಿಗೆ 12-13 ವರ್ಷ ಮಾತ್ರ, ಆ ವ್ಯಕ್ತಿ ಚಾಕುವಿನಿಂದ ಇರಿಯುವುದಾಗಿ ಬೆದರಿಸಿದ್ದಾನೆ,” ಎಂದು ಹೇಳಿದ್ದಾರೆ. ಪೊಲೀಸರು ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ, ಅವರ ನಿಷ್ಕ್ರಿಯತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದಾಗ ಲಿಫ್ಟ್‌ನಲ್ಲಿ ಮಹಿಳಾ ಹೌಸ್‌ಕೀಪರ್ ಸಹ ಇದ್ದರು. ಅವರು ಲಿಫ್ಟ್ ಅನ್ನು ನೆಲಮಹಡಿಯಲ್ಲಿ ನಿಲ್ಲಿಸಿ, ಬಾಲಕ ಹೊರಬರಲು ಸಹಾಯ ಮಾಡಿದರು. ಆದಾಗ್ಯೂ, ಹಲ್ಲೆಕೋರ ಹಿಂಬಾಲಿಸಿ, ಭದ್ರತಾ ಸಿಬ್ಬಂದಿ ಮತ್ತು ಇತರ ನಿವಾಸಿಗಳು ಮಧ್ಯಪ್ರವೇಶಿಸುವವರೆಗೂ ಕಟ್ಟಡದ ಲಾಬಿಯಲ್ಲಿ ಹಲ್ಲೆ ಮುಂದುವರಿಸಿದ. ಬಾಲಕನ ತಾಯಿ ಶಿವಾಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ಆರಂಭದಲ್ಲಿ ಸಣ್ಣಪುಟ್ಟ ಅಪರಾಧ (non-cognizable offence) ಎಂದು ಪ್ರಕರಣ ದಾಖಲಿಸಿಕೊಂಡರು. ಆದರೆ, ಕುಟುಂಬದವರ ತೀವ್ರ ಪ್ರತಿಭಟನೆಯ ನಂತರ ನಾಲ್ಕು ದಿನಗಳ ಬಳಿಕ ಪೂರ್ಣ ಎಫ್‌ಐಆರ್ (FIR) ದಾಖಲಿಸಲಾಗಿದೆ.
This man slapped a child multiple times, bit his hand, and threatened him, saying, “Meet me outside, I’ll stab you with a knife.”
— Incognito (@Incognito_qfs) July 9, 2025
All this anger because he thought the kid closed the lift. In reality, the kid stopped the lift and opened it for him.
This happened in Ambernath,… pic.twitter.com/FpE742paTX