Viral Video: ವಿಮಾನ ನಿಲ್ದಾಣದಲ್ಲಿ ಮನೆಯಿಂದ ತಂದ ತಿಂಡಿ ತಿಂದ ಅಮ್ಮ-ಮಗ

ವಿಮಾನಗಳಲ್ಲಿ ಸಂಚಾರ ಮಾಡುವವರು ಸಾಮಾನ್ಯವಾಗಿ ಶ್ರೀಮಂತ ವರ್ಗದವರು. ಆದ್ದರಿಂದ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಇರುವವರು. ಆದರೆ ಇದೀಗ ಮಧ್ಯಮ ವರ್ಗದ ಕುಟುಂಬಗಳವರೂ ವಿಮಾನ ಸಂಚಾರವನ್ನು ಹಲವು ಬಾರಿ ನಡೆಸುವುದು ಅನಿವಾರ್ಯವಾಗುತ್ತದೆ.

ಆಗ ಟಿಕೆಟ್​ಗೆ ದುಬಾರಿ ಬೆಲೆ ಕೊಡುವುದು ಒಂದೆಡೆಯಾದರೆ, ವಿಮಾನ ನಿಲ್ದಾಣಗಳಲ್ಲಿ ಆಹಾರಗಳಿಗೆ ವಿಧಿಸುವ ಐದಾರು ಪಟ್ಟು ಹೆಚ್ಚಿಗೆ ದುಡ್ಡು ಕೊಡುವುದು ಕೂಡ ದೊಡ್ಡ ಕಷ್ಟವೇ. ಅದನ್ನು ವಿವರಿಸುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಟ್ವಿಟ್ಟರ್ ಬಳಕೆದಾರ ಮಧುರ್ ಸಿಂಗ್ ಮತ್ತು ಅವರ ತಾಯಿ ಗೋವಾಗೆ ವಿಮಾನ ಹತ್ತುವ ಮೊದಲು ಏರ್ ಪೋರ್ಟ್‌ನಲ್ಲಿ ಮನೆಯಲ್ಲಿ ತಯಾರಿಸಿದ ಆಲೂ ಪರಾಠ ಮತ್ತು ನಿಂಬು ಆಚಾರ್‌ನ ಊಟವನ್ನು ತಿನ್ನುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

“ವಿಮಾನಗಳಲ್ಲಿ ಪ್ರಯಾಣ ಮಾಡುವುದು ಮಧ್ಯಮ ವರ್ಗದವರಿಗೆ ಈಗ ಸುಲಭವಾಗಿದ್ದರೂ 400 ರೂಪಾಯಿ ಮೌಲ್ಯದ ದೋಸೆ ಮತ್ತು 100 ರೂಪಾಯಿ ಮೌಲ್ಯದ ನೀರಿನ ಬಾಟಲಿಯನ್ನು ಖರೀದಿಸುವುದು ಬಹಳ ಕಷ್ಟ” ಎಂದು ಮಧುರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಈ ವರ್ತನೆಯನ್ನು ನೋಡಿ ಹಲವರು ನಗುತ್ತಾರೆ. ಕೆಲವರು ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ, ಆದರೆ ನಮಗೇನೂ ತೊಂದರೆಯಿಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದು, ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

https://twitter.com/ThePlacardGuy/status/1625016300614606862?ref_src=twsrc%5Etfw%7Ctwcamp%5Etweetembed%7Ctwterm%5E1625016309548449793%7Ctwgr%5Efd8f7968e90e0632dbb43317810b4a002ac9c537%7Ctwcon%5Es2_&ref_url=https%3A%2F%2Fwww.news18.com%2Fbuzz%2Fman-slams-overpriced-airport-food-eats-ghar-ka-khana-with-mum-before-flight-7080925.html

https://twitter.com/NatkhatVeeru/status/1625409137688596482?ref_src=twsrc%5Etfw%7Ct

https://twitter.com/PetwingPenguin/status/1625356099863056385?ref_src=twsrc%5Etfw%7Ctwcamp%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read