ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ಬೇಕು, ತಮ್ಮ ತಮ್ಮ ವಿಡಿಯೋಗಳಿಗೆ ವಿವ್ಯೂವರ್ಸ್ ಹೆಚ್ಚಾಗ್ಬೇಕು ಅಂತ ಯುವಕರು ಮಾಡೋ ಕಸರತ್ತುಗಳು ಒಂದರೆಡಲ್ಲ. ಇತ್ತೀಚೆಗೆ ಯುವಕನೊಬ್ಬ ವಿಡಿಯೋಗಾಗಿ ಮಾಡಲು ಹೋದ ಸ್ಟಂಟ್‌ನಿಂದಾಗಿಯೇ ತನ್ನ ವಾಹನದ ಪರವಾನಗಿಯನ್ನೇ ಕಳೆದುಕೊಂಡಿದ್ದಾನೆ.
ಹುಜೇನ್ ಜಾವೇದ್ ಅನ್ನೊ ಟ್ಟಿಟ್ಟರ್ ಅಕೌಂಟ್‌ನಲ್ಲಿ, ಇತ್ತೀಚೆಗೆ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕೂತಿರುತ್ತಾನೆ. ಅಷ್ಟೆ ಅಲ್ಲ ತನ್ನ ಎರಡು ಬಾಹುಗಳನ್ನ ಗಾಳಿಯಲ್ಲಿ ಚಾಚಿರುತ್ತಾನೆ. ಸೇಮ್ ಟು ಸೇಮ್ ಸಿನೆಮಾ ಸ್ಟೈಲ್‌ನಲ್ಲಿ ಕೊನೆಗೆ ಅದೇ ವಿಡಿಯೋವನ್ನ ಪೋಸ್ಟ್ ಕೂಡ ಮಾಡ್ತಾನೆ.
ಈ ವಿಡಿಯೋ ವೈರಲ್ ಆಗಿತ್ತು. ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದರು. ಆದರೆ ಇದೇ ವಿಡಿಯೋ ನೋಡಿ ಗೌತಮ್‌ಬುದ್ಧ ನಗರದ ಪೊಲೀಸರು ಆ ಯುವಕನೇ ಶಾಕ್ ಆಗುವ ಹಾಗೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುತ್ತಿರೋ ಕಾರಿನ ನಂಬರ್ ಪ್ಲೇಟ್ ಮೂಲಕ, ಯುಪಿಯ ಈ ಕಾರು ಯಾರದ್ದೆಂದು ಪತ್ತೆ ಹಚ್ಚಿ ಕಾರಿನ ಆರ್‌ಸಿ ಮತ್ತು ಡ್ರೈವಿಂಗ್ ಲೈಸೆನ್ಸ್‌ನ್ನ ಅಮಾನತುಗೊಳಿಸಲಾಗಿದೆ. ಅಷ್ಟೆ ಅಲ್ಲ ಕಾರಿನ ಮೇಲೆ ಕುತಿರುವ ವ್ಯಕ್ತಿಗೆ 26,000 ರೂಪಾಯಿ ಚಲನ್ ವಿಧಿಸಲಾಗಿದೆ.
ಈ ರೀತಿ ಸ್ಟಂಟ್ ಮಾಡುವ ಮುನ್ನ ಜನರು ಮೈಮರೆಯದಿರಲಿ ಎಂದು, ಪೊಲೀಸರು ಈ ವಿಡಿಯೋವನ್ನ ಟ್ಟಿಟ್ಟರ್‌ನಲ್ಲಿ ಶೇರ್ ಮಾಡಿ, ಈ ರೀತಿ ಸ್ಟಂಟ್ ಮಾಡಿದರೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈಗ ಯುಪಿಯ ಈ ಕಾರನ್ನ ವಶಪಡಿಸಿಕೊಂಡು, ಆರ್ಪಿಸಿಯ ಸೆಕ್ಷನ್ 151ಪ್ರಕಾರ ವ್ಯಕ್ತಿಯನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
https://twitter.com/hussainjaved81/status/1631140874418806784?ref_src=twsrc%5Etfw%7Ctwcamp%5Etweetembed%7Ctwterm%5E1631140874418806784%7Ctwgr%5E829038b9aad2804e2638075239af90d66b883220%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-man-sits-on-moving-cars-bonnet-to-perform-road-stunt-in-gautam-buddh-nagar-police-suspend-driving-license