ಟ್ರಕ್ಕನ್ನು ರೈಲು ಎಂದು ಗ್ರಹಿಸಿದ ಟೆಸ್ಲಾ ಕಾರು: ವಿಡಿಯೋ ವೈರಲ್​

ಚಲಿಸುತ್ತಿರುವ ಟ್ರಕ್‌ ಅನ್ನು ಟೆಸ್ಲಾ ಕಾರೊಂದು ರೈಲು​ ಎಂದು ಭಾವಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೇಮ್ಸ್ ಅರ್ಬನಿಯಾಕ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ.

ಟ್ರಕ್‌ಗಳ ಗುಂಪನ್ನು ಟೆಸ್ಲಾ ಕಾರು ರೈಲು ಎಂದು ತಪ್ಪಾಗಿ ಗ್ರಹಿಸಿದೆ ಎಂದು ಅವರು ಹೇಳಿದ್ದಾರೆ. ಟೆಸ್ಲಾ ಕಂಪೆನಿಯ ನ್ಯಾವಿಗೇಷನ್ ಸಿಸ್ಟಮ್‌ನಲ್ಲಿನ ಈ ದೋಷವಾಗಿದೆ ಎಂದಿರುವ ಅವರು, ವಿಡಿಯೋದಲ್ಲಿ ಅದರ ಹೈಲೈಟ್​ ಮಾಡಿದ್ದಾರೆ.

ವಿಡಿಯೋದಲ್ಲಿ, ಟೆಸ್ಲಾ ಕಾರು ರೈಲು ಹಾದುಹೋಗಲು ಲೆವೆಲ್ ಕ್ರಾಸಿಂಗ್‌ನಲ್ಲಿ ಕಾಯುತ್ತಿರುವುದನ್ನು ಕಾಣಬಹುದು. ಆದರೆ ಕಾರು ಅಲ್ಲಿ ಚಲಿಸುತ್ತಿರುವುದು ಟ್ರಕ್​ಗಳು ಎಂದು ಗ್ರಹಿಸುವ ಬದಲು ರೈಲು ಎಂದು ತಪ್ಪಾಗಿ ತಿಳಿದಿರುವ ಕುರಿತು ಬಳಕೆದಾರರು ಬರೆದುಕೊಂಡಿದ್ದಾರೆ.

ನಾನು ವಾರಾಂತ್ಯದಲ್ಲಿ ಪಟ್ಟಣದಿಂದ ಹೊರಗೆ ಹೋಗಿದ್ದೆ. ಟೆಸ್ಲಾ ನನಗೆ ಅತ್ಯಂತ ಆನಂದ ನೀಡಿದೆ. ಆದರೆ ಟ್ರಕ್​ ಅನ್ನು ರೈಲು ಎಂದು ಗ್ರಹಿಸಿದ್ದು ಮಾತ್ರ ತಮಾಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ಗಳು ಬಂದಿವೆ.

https://twitter.com/JamesUrbaniak/status/1627373676202201088?ref_src=twsrc%5Etfw%7Ctwcamp%5Etweetembed%7Ctwterm%5E1627373676202201088%7Ctwgr%5Efff6e9d9212ac3e3c707803188e07e9d7d28fc6c%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fman-shares-video-of-tesla-car-mistaking-train-for-trucks-internet-cracks-up-3800880

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read