ಕಾಲ ಬದಲಾದ ಹಾಗೆ ಮೋಸ ಮಾಡುವ ಹೊಸ ಹೊಸ ಬಗೆಯೂ ಕಂಡು ಹಿಡಿಯಲಾಗಿದೆ. ಈಗ ಏನಿದ್ದರೂ ಇಂಟರ್ನೆಟ್ ಜಮಾನಾ. ಆದ್ದರಿಂದ ಮೋಸ ಮಾಡೋರು ಕೂಡ ಇದೇ ಇಂಟರ್ನೆಟ್ ಮೂಲಕವೇ ಲೇಟೆಸ್ಟ್ ಆಗಿ ವಂಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ.
ಎಲ್ಲೋ ಕೂತು, ಒಂದೇ ಒಂದು ಮೆಸೇಜ್ ನಲ್ಲಿ, ಇನ್ನೊಬ್ಬರ ಅಕೌಂಟ್ ಖಾಲಿ ಮಾಡಿ ಬಿಟ್ಟಿರ್ತಾರೆ. ಮಹೇಶ್ ಅನ್ನೋ ಹೆಸರಿನ ವ್ಯಕ್ತಿಗೂ ಈ ಒಂದು ಅನುಭವ ಆಗಿದೆ. ಅದೃಷ್ಟವಶಾತ್ ಮಹೇಶ್ ಎಚ್ಚೆತ್ತುಕೊಂಡಿದ್ದರಿಂದ ಅವರು ಮೋಸಗಾರರ ಜಾಲಕ್ಕೆ ಬಿದ್ದಿಲ್ಲ.
ಈ ಮೋಸಗಾರರು ಹೇಗೆ ಮೋಸ ಮಾಡುತ್ತಾರೆ ಅಂತ ಒಂದು ಪೋಸ್ಟ್‌ನ ಮಹೇಶ್ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಶೀರ್ಷಿಕೆಯಲ್ಲಿ ‘ಜೀವನದ ಒಂದು ಪಾಠ‘ ಎಂದು ಬರೆದುಕೊಂಡಿದ್ದಾರೆ. ಇದೇ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹೇಶ್ ಅವರಿಗೆ ವಾಟ್ಸಾಪ್ ನಲ್ಲಿ ಅನಾಮಧೇಯ ಸಂಖ್ಯೆಯಿಂದ ಸಂದೇಶವೊಂದು ಒಂದಿದೆ. ಅದರಲ್ಲಿ ಜೀವನದಲ್ಲಿ ಕೇವಲ ಪ್ರೀತಿ ಮತ್ತು ಗೆಳೆಯರಿದ್ದರೆ ಸಾಕಾಗುವುದಿಲ್ಲ. ನೀವು ನಿಮ್ಮ ಬಗ್ಗೆ ಯೋಚನೆ ಮಾಡಿ. ಮೊದಲು ಕೈತುಂಬಾ ಹಣ ಮಾಡಿ ಅನ್ನೊ ಸಂದೇಶ ಬಂದಿದೆ. ನೀವು ಏನಾದರೂ ಹಣ ಮಾಡೋದರ ಬಗ್ಗೆ ಯೋಚನೆ ಮಾಡ್ತಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ. ಇಲ್ಲಿ ನಿಮಗೆ 500-5000 ರೂಪಾಯಿ ದುಡಿಯುವ ಅವಕಾಶ ಇದೆ. ಇಲ್ಲಿ ನೀವು ಪಾರ್ಟ್‌ಟೈಮ್ ಇಲ್ಲಾ ಫುಲ್ ಟೈಮ್ ಕೂಡಾ ದುಡಿಯಬಹುದು ಎಂದು ಸಂದೇಶದಲ್ಲಿ ಬರೆಯಲಾಗಿತ್ತು.
ಅದೃಷ್ಟವಶಾತ್ ಮಹೇಶ್ ಅಲ್ಲಿ ಬಂದ ಯಾವುದೇ ಲಿಂಕ್ ಕ್ಲಿಕ್ ಮಾಡಿರಲಿಲ್ಲ. ತಮಗೆ ಬಂದ ಈ ಮೆಸೇಜ್ ಸ್ಕ್ರಿನ್‌ಶಾಟ್ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ಪೋಸ್ಟನ್ನ 5000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವರು ಇದನ್ನ ಓದಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.
https://twitter.com/mister_whistler/status/1665326562877784071?ref_src=twsrc%5Etfw%7Ctwcamp%5Etweetembed%7Ctwterm%5E1665326562877784071%7Ctwgr%5Efe6199629c5dd2810731f9692e82c055f3f50fb6%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-shares-valuable-life-lesson-received-from-whatsapp-scammer-twitter-cant-stop-giggling-2389534-2023-06-06
https://twitter.com/mister_whistler/status/1665326562877784071?ref_src=twsrc%5Etfw%7Ctwcamp%5Etweetembed%7Ctwterm%5E1665331570490871811%7Ctwgr%5Efe6199629c5dd2810731f9692e82c055f3f50fb6%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fman-shares-valuable-life-lesson-received-from-whatsapp-scammer-twitter-cant-stop-giggling-2389534-2023-06-06
https://twitter.com/ehmadzubair/status/1665720839696728064?ref_src=twsrc%5Etfw%7Ctwcamp%5Etweetembed%7Ctwterm%5E1665720839696728064%7Ctwgr%5Efe6199629c5dd2810731f9692e82c055f3f50fb6%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-shares-valuable-life-lesson-received-from-whatsapp-scammer-twitter-cant-stop-giggling-2389534-2023-06-06