SHOCKING VIDEO: ಚಿಕ್ಕಪ್ಪನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿ

ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 55 ವರ್ಷದ ವ್ಯಕ್ತಿಯೊಬ್ಬನನ್ನು ಆತನ 26 ವರ್ಷದ ಸಂಬಂಧಿ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಏಪ್ರಿಲ್ 21 ರಂದು ಈ ಘಟನೆ ನಡೆದಿದ್ದು, ಗಾಯಾಳುವನ್ನು ಕಾವೇರಿಪಟ್ಟಣದ ಪೂಮಲೈ ನಗರದ ವಿ.ಚಿನ್ನವರ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಚಿನ್ನವರ್ ತನ್ನ 26 ವರ್ಷದ ಸಂಬಂಧಿ ಎಂ. ಸೆಂಥಿಲ್ ಅವರೊಂದಿಗೆ ಜಮೀನು ವಿವಾದ ಹೊಂದಿದ್ದು, ಏಪ್ರಿಲ್ 19 ರಂದು ಅವರ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿತ್ತು, ನಂತರ ಏಪ್ರಿಲ್ 21 ರ ಭಾನುವಾರದಂದು ಸೆಂಥಿಲ್ ಚಿನ್ನವರ್ ಅವರ ಮನೆಗೆ ಹೋಗಿ ಬೆಂಕಿ ಹಚ್ಚಿದ್ದಾನೆ. ದುರಂತ ಘಟನೆಯ ನಂತರ, ನೆರೆಹೊರೆಯವರು ಬೆಂಕಿ ನಂದಿಸಿ ಚಿನ್ನವರ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, 70% ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಸವಳೂರು ಜಂಕ್ಷನ್ ರಸ್ತೆಯಲ್ಲಿರುವ ಗೊಬ್ಬರ ಅಂಗಡಿಯಲ್ಲಿ ಚಿನ್ನವರ್ ಇದ್ದಾಗ ಈ ಕೃತ್ಯ ನಡೆದಿದೆ. ಸೆಂಥಿಲ್ ಪಾತ್ರೆಯಲ್ಲಿ ಪೆಟ್ರೋಲ್ ಹಾಕಿಕೊಂಡು ಅಂಗಡಿಗೆ ನುಗ್ಗಿ ಎರಚಿದ್ದಾನೆ. ಚಿನ್ನವರ್ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಸೆಂಥಿಲ್ ಬೆಂಕಿ ಹಚ್ಚಿ ಮತ್ತೆ ಪೆಟ್ರೋಲ್ ತುಂಬಿದ ಪ್ಯಾಕೆಟ್ ಗಳನ್ನು ಅವರ ಮೇಲೆ ಎಸೆದಿದ್ದಾನೆ. ಚಿನ್ನವರ್ ಅವರ ಪತ್ನಿ ಪಟ್ಟಮ್ಮಾಳ್ ಅವರು ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕಾವೇರಿಪಟ್ಟಣಂ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

https://twitter.com/Autokabeer/status/1782306721844625783

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read