ಗಂಡನಿಗೆ ಡಿವೋರ್ಸ್ ಕೊಡು ಮದ್ವೆ ಆಗ್ತೀನಿ ಎಂದ ಯುವಕ; ವಿಚ್ಛೇದನವಾಗ್ತಿದಂತೆ ಬದಲಾದ ವರಸೆಯಿಂದ ಮಹಿಳೆ ಕಂಗಾಲು…!

ಗಂಡನಿಗೆ ವಿಚ್ಛೇದನ ನೀಡಿದರೆ ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ವಂಚಿಸಿದ್ದಾನೆಂದು ಉತ್ತರಖಂಡ ಮೂಲದ 28 ವರ್ಷದ ಮಹಿಳೆಯೊಬ್ಬರು ಯುವಕನೊಬ್ಬನ ದೂರು ನೀಡಿದ್ದಾರೆ.

ಓರ್ವ ಮಗನನ್ನು ಹೊಂದಿರುವ ಮಹಿಳೆ ನನ್ನನ್ನು ಸುಳ್ಳಿನ ಜಾಲದಲ್ಲಿ ಸಿಲುಕಿಸಿ, ಗಂಡನಿಗೆ ವಿಚ್ಛೇದನ ನೀಡಿದ ಬಳಿಕ ಮದುವೆಯಾಗಲು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾಳೆ.

ಆಕೆಯ ಹೇಳಿಕೆಯ ಪ್ರಕಾರ, ಖಾನ್‌ಪುರದಲ್ಲಿ ತನ್ನ ಗಂಡನ ಪಾರ್ಶ್ವವಾಯು ಪೀಡಿತ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋದಾಗ ಯುವಕನ ಪರಿಚಯವಾಗಿದೆ. ಇಬ್ಬರ ನಡುವೆ ಮಾತುಕತೆ ಬಳಿಕ ಪ್ರೀತಿ, ಭರವಸೆಗಳ ಜಾಲವನ್ನು ಯುವಕ ಮಹಿಳೆಯ ಸುತ್ತ ಹೆಣೆದಿದ್ದ. ನಿನ್ನ ಪತಿಯನ್ನು ತೊರೆದು ಬಂದರೆ ನಿನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನಂತೆ.

ಅವನ ಮಾತು ನಂಬಿದ ಮಹಿಳೆ ಗಂಡನಿಗೆ ವಿಚ್ಚೇದನ ನೀಡಿದ್ದಾಳೆ. ಇಷ್ಟೇ ಅಲ್ಲದೆ ಮಹಿಳೆಯೊಂದಿಗೆ ಯುವಕ ಹಲವು ಬಾರಿ ಶಾರೀರಿಕ ಸಂಬಂಧ ಹೊಂದಿದ್ದು, ಆಕೆಗೆ ಅರಿವಿಲ್ಲದಂತೆ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮದುವೆಯಾಗುವಂತೆ ಮಹಿಳೆ ಒತ್ತಾಯಿಸಿದ್ದಕ್ಕೆ ಬೆದರಿಕೆ ಹಾಕಿದ್ದಾನೆ.

ಬಳಿಕ ಬೇರೆ ದಾರಿಯಿಲ್ಲದೆ ಮಹಿಳೆ ತನ್ನ ಕುಟುಂಬವನ್ನು ಸಂಪರ್ಕಿಸಿದರೆ, ಅಲ್ಲಿ ಆಕೆಯನ್ನು ಬಹಿಷ್ಕಾರ ಹಾಕಲಾಗಿದೆ. ಕೊನೆಗೆ ಧೈರ್ಯ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಆಕೆಯ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಪ್ರಕರಣದಲ್ಲಿ ನ್ಯಾಯ ಪಡೆಯಲೇಬೇಕೆಂದು ಕೊನೆಗೆ ಮಹಿಳೆ ಪೊಲೀಸ್ ಸರ್ಕಲ್ ಆಫೀಸರ್ ಕಚೇರಿಯಲ್ಲಿ ದೂರು ನೀಡಿದ್ದು ತನಿಖೆ ಮುಂದುವರಿದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read