Watch: ಕಾರ್ ಚಾಲನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ; ಪ್ರಾಣ ಪಣಕ್ಕಿಟ್ಟು ರಕ್ಷಣೆಗೆ ಓಡೋಡಿ ಬಂದ ರಿಯಲ್‌ ಹೀರೋ

ಡ್ರೈವಿಂಗ್ ಮಾಡುವಾಗ ಪ್ರಜ್ಞೆ ಕಳೆದುಕೊಂಡ ಮಹಿಳೆಯನ್ನು ರಕ್ಷಿಸಲು ಅಮೆರಿಕಾದ ಜನನಿಬಿಡ ಹೆದ್ದಾರಿಯೊಂದರಲ್ಲಿ ವ್ಯಕ್ತಿಯೊಬ್ಬ ಓಡುತ್ತಾ ರಕ್ಷಿಸುವ ವಿಡಿಯೋ ವೈರಲ್ ಆಗಿದೆ. ಮಹಿಳೆಯನ್ನು ರಕ್ಷಿಸಲು ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ.

ಟ್ವಿಟ್ಟರ್‌ನಲ್ಲಿ ಗುಡ್ ನ್ಯೂಸ್ ವರದಿಗಾರ ಹಂಚಿಕೊಂಡ ಕ್ಲಿಪ್ ನಲ್ಲಿ ಹಿಮದಿಂದ ಆವೃತವಾದ ಫುಟ್‌ಪಾತ್ ಮೇಲೆ ನಿಯಂತ್ರಣ ಕಳೆದುಕೊಂಡಂತೆ ಕಂಡುಬರುವ ನೀಲಿ ಬಣ್ಣದ ಕಾರು ಚಲಿಸುತ್ತಿರುತ್ತದೆ.

ಇದನ್ನು ಕಂಡ ವ್ಯಕ್ತಿ ರಸ್ತೆಯ ಮತ್ತೊಂದು ಬಂದಿಯಿಂದ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ರೂ ಪ್ರಾಣ ಲೆಕ್ಕಿಸದೇ ನುಗ್ಗಿ ಬರುತ್ತಾನೆ. ಫುಟ್ ಪಾತ್ ಮೇಲೆ ಹೋಗುತ್ತಿರುವ ಕಾರನ್ನು ಹಿಡಿಯುವ ಪ್ರಯತ್ನ ಮಾಡುತ್ತಾನೆ.

ವ್ಯಕ್ತಿಯನ್ನು ಅಡಾಲ್ಫೊ ಮೊಲಿನಾ ಎಂದು ಗುರುತಿಸಲಾಗಿದ್ದು, ಕಳೆದ ವಾರ ಮ್ಯಾಸಚೂಸೆಟ್ಸ್ ನ ಅಂತರರಾಜ್ಯ ಹೆದ್ದಾರಿ 93ರಲ್ಲಿ ಈ ಘಟನೆ ನಡೆದಿದೆ.

ಕಾರನ್ನು ನಿಲ್ಲಿಸಲು ಪೊಲೀಸರು ಸ್ವಲ್ಪ ಸಮಯದ ಬಳಿಕ ಆಗಮಿಸಿದರು. ನಂತರ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಕಾಮೆಂಟ್ಸ್ ವಿಭಾಗದಲ್ಲಿ ಗುಡ್ ನ್ಯೂಸ್ ವರದಿಗಾರ ತಿಳಿಸಿದ್ದಾರೆ. ಅಡಾಲ್ಫೊ ಮೊಲಿನಾ ಅವರನ್ನು ನೆಟ್ಟಿಗರು ರಿಯಲ್ ಹೀರೋ ಎಂದು ಹೊಗಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read