Watch Video | ಲಂಡನ್​ ಸ್ಟ್ರೀಟ್​ನಲ್ಲಿ ‘ಪೆಹಲಾ ನಶಾ‘ ಹಾಡು ಹೇಳಿದ ಯುವಕ; ಭಾರತೀಯರ ಜೊತೆ ವಿದೇಶಿಯರೂ ಫುಲ್ ಫಿದಾ

article-image

90ರ ದಶಕದಲ್ಲಿ ಬಂದ ಸಿನೆಮಾ ‘ಜೋ ಜೀತಾ ವಹೀ ಸಿಕಂದರ್’ ಅಮೀರ್‌ ಖಾನ್ ನಟನೆಯ ಬಾಲಿವುಡ್​ನ ಸೂಪರ್ ಡೂಪರ್ ಹಿಟ್ ಸಿನೆಮಾಗಳಲ್ಲೊಂದು. ಈ ಸಿನೆಮಾ ರಿಲೀಸ್ ಆಗಿ 30 ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಆದರೂ ಈ ಸಿನೆಮಾ ಇಂದೂ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದೆ.

ಸಿನೆಮಾ ಮಾತ್ರ ಅಲ್ಲ ಸಿನೆಮಾದ ಹಾಡು ಕೂಡ ಇಂದಿಗೂ ಎವರ್ಗ್ರೀನ್ ಆಗಿದೆ. ಇದೇ ಸಿನೆಮಾದ ‘ಪೆಹಲಾ ನಶಾ‘ ಹಾಡನ್ನ ಯುವಕನೊಬ್ಬ ಆಕ್ಸ್​​ಫರ್ಡ್​ ಸ್ಟ್ರೀಟ್​ನಲ್ಲಿ ಅದ್ಭುತವಾಗಿ ಹಾಡಿ ಜನರ ಹೃದಯ ಗೆದ್ದಿದ್ದಾನೆ.

ಲಂಡನ್ನಲ್ಲಿ ಬೀದಿ ಬದಿಯಲ್ಲಿ ಹಾಡು ಹೇಳುವುದು ಇಲ್ಲಾ, ಸಂಗೀತ ವಾದ್ಯಗಳನ್ನ ನುಡಿಸುವುದು ಕಾಮನ್. ಅದಕ್ಕೆ ರೆಟ್ರೋ ಬೀಟ್ ಅಂತ ಹೇಳಲಾಗುತ್ತೆ. ಅದೇ ಬೀದಿಗಳಲ್ಲಿ ಆಗಾಗ ಬಾಲಿವುಡ್ ಹಾಡುಗಳನ್ನ ಸಹ ಕೇಳಬಹುದು. ಅದೇ ಲಂಡನ್ನ ಆಕ್ಸ್​ಫರ್ಡ್​ ಸ್ಟ್ರೀಟ್​ನಲ್ಲಿ, ಯುವಕ ಹಾಡಿದ್ದ ‘ಪೆಹಲಾ ನಶಾ‘ ಹಾಡು ವೈರಲ್ ಆಗಿದೆ. ಈ ವಿಡಿಯೋವನ್ನ ಈಗ ಬರೋಬ್ಬರಿ ಎರಡು ಮಿಲಿಯನ್ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಬಾಲಿವುಡನ್ ಖ್ಯಾತ ಹಿನ್ನಲೆ ಗಾಯಕರಾದ ಉದಿತ್ ​ನಾರಾಯಣ್​ ಹಾಗೂ ಸಾಧನ ಸರ್ಗಮ್ ಅವರ ದನಿಯಲ್ಲಿ ಮೂಡಿರುವ ಈ ಹಾಡು ಇಂದಿಗೂ ಜನಪ್ರಿಯತೆಯಲ್ಲಿ ಹಿಂದುಳಿದಿಲ್ಲ. ಈ ವಿಡಿಯೋದಲ್ಲಿ ಗಮನಿಸುವ ಹಾಗೆ ಕೆಲವರು ಈ ಹಾಡನ್ನ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರೆ ಇನ್ನೂ ಕೆಲವರು ಅಲ್ಲೇ ಕೂತು ಈ ಯುವಕನ ಜೊತೆಯೇ ಗುನುಗುನಿಸುತ್ತಿದ್ದಾರೆ. ಅದರಲ್ಲಿ ವಿದೇಶಿಯರು ಕೂಡ ಇದ್ದರು.

ಯುವಕ ಈ ಹಾಡನ್ನ ಎಷ್ಟು ಹೃದಯದಿಂದ ಹಾಡಿದ್ದನೋ, ಅದೇ ರೀತಿ ಅಲ್ಲಿದ್ದವರು ಕೂಡಾ ಆತನ ದನಿಯನ್ನ ಅಷ್ಟೆ ಮೆಚ್ಚಿದರು ಅನ್ನುವುದಕ್ಕೆ ಕಾಮೆಂಟ್ ರಾಶಿಗಳೇ ಸಾಕ್ಷಿಯಾಗಿದೆ. ಒಬ್ಬರಂತೂ ಕಾಮೆಂಟ್​​ನಲ್ಲಿ ‘ನಾನು ನಿಮ್ಮ ದನಿಗೆ ಫುಲ್ ಫಿದಾ ಆಗಿದ್ದೇನೆ’ ಎಂದಿದ್ದಾರೆ….!

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read