ಭುವನೇಶ್ವರ: ವ್ಯಕ್ತಿಯೋರ್ವ ತನ್ನ ಸಂಬಂಧಿಕನನ್ನೇ ಬರ್ಬರವಾಗಿ ಹತ್ಯೆಗೈದು ಬಳಿಕ ರುಂಡ-ಮುಂಡ ಬೇರ್ಪಡಿಸಿ, ಆತನ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಘಟನೆ ಓಡಿಶಾದ ಕಿಯೋಂಜಾರ್ ನಲ್ಲಿ ನಡೆದಿದೆ.
ಕಬಿ ದೇಹುರಿ ಎಂಬ ಯುವಕ ತನ್ನ ಸಂಬಂಧಿಯೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು ಬಳಿಕ ಆತನ ರುಂಡದೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಹಳೆ ದ್ವೇಷದಿಂದ ಯುವಕ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಯುವಕನ ಗ್ರಾಮದಲ್ಲಿ ದಂಡಾ ನಾಚಾ ಎಂಬ ಸಾಂಪ್ರದಾಯಿಕ ನೃತ್ಯ ನಡೆಯುತ್ತಿತ್ತು. ಗ್ರಾಮಸ್ಥರೆಲ್ಲರೂ ಈ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ತನ್ನ ಸಂಬಂಧಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ ಅಲ್ಲಿಯೇ ಕೊಡಲಿಂದ ಆತನ ರುಂದ ಕಡಿದಿದ್ದಾನೆ. ಹೀಗೆ ಕತ್ತರಿಸಿದ ತಲೆಯನ್ನು ಚೀಲದಲ್ಲಿ ಇಟ್ಟುಕೊಂಡು ಸುಕತಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಬಳಿಕ ಘಟನೆ ಬಗ್ಗೆ ಮಹೈತಿ ನೀಡಿ ಶರಣಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.