ಸಹ ಪ್ರಯಾಣಿಕಳಿಗೆ ಕೋಟ್ಯಾಧಿಪತಿ ಉದ್ಯಮಿಯಿಂದ ಹೀಗೊಂದು ವಿಚಿತ್ರ ಆಫರ್; ವಿಷಯ ತಿಳಿದ್ರೆ ‘ಶಾಕ್’ ಆಗ್ತೀರಾ….!

ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್‌ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ ಸಖಿ ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ.

ಸ್ಟೀವ್‌ ಕರ್ಶ್ ಹೆಸರಿನ ವ್ಯಕ್ತಿಯೊಬ್ಬರು ಸರಣಿ ಟ್ವೀಟ್‌ಗಳ ಮೂಲಕ ಈ ಘಟನೆಯನ್ನು ವಿವರಿಸಿದ್ದಾರೆ. “ನಾನೀಗ ಡೆಲ್ಟಾ ಏರ್‌ವೇಸ್ ವಿಮಾನವೊಂದರಲ್ಲಿ ಇದ್ದೇನೆ. ಪ್ರಥಮ ದರ್ಜೆಯ ಕ್ಯಾಬಿನ್‌ನಲ್ಲಿ ನನ್ನ ಪಕ್ಕದಲ್ಲಿ ಕುಳಿತ ಮಹಿಳೆ, ಇಡೀ ಪ್ರಯಾಣದುದ್ದಕ್ಕೂ ತನ್ನ ಮಾಸ್ಕ್ ತೆಗೆದರೆ $100,000 ಕೊಡುವುದಾಗಿ ನೀಡಿದ್ದ ಆಫರ್‌ ತಿರಸ್ಕರಿಸಿದ್ದಾರೆ. ಆಕೆ ಫಾರ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ,” ಎಂದಿದ್ದಾರೆ.

ತಾನು ಅದೆಷ್ಟೇ ಬಾರಿ ಕೇಳಿದರೂ ಆಕೆ ಮಾಸ್ಕ್‌ ತೆರೆಯಲಿಲ್ಲ ಎನ್ನುವ ಸ್ಟೀ‌ವ್‌, ಕೊನೆಗೂ ಆಕೆ ಉಪಹಾರ ಸೇವಿಸುವ ಸಂದರ್ಭದಲ್ಲಿ ಮಾಸ್ಕ್ ತೆರೆದಿದ್ದಾರೆ ಎಂದಿದ್ದಾರೆ.

ಸ್ಟೀವ್‌ರ ಈ ಟ್ವೀಟ್‌ಗಳು ಬಹಳಷ್ಟು ನೆಟ್ಟಿಗರಿಗೆ ಸಿಟ್ಟು ತರಿಸಿವೆ. “ನಿಮಗೆ ಮಹಿಳೆಯರಿಗೆ ಪ್ರಯಾಣದ ನಡುವೆ ಹೀಗೆ ದುಡ್ಡು ಕೊಡುವ ಅಭ್ಯಾಸವಿದೆಯೇ?” ಎಂದು ನೆಟ್ಟಿಗರೊಬ್ಬರು ಸ್ಟೀವ್‌ರನ್ನು ಪ್ರಶ್ನಿಸಿದ್ದಾರೆ.

ಸ್ಟೀವ್‌ಗೆ ಈ ಖಯಾಲಿ ಬಹಳ ದಿನಗಳಿಂದ ಇದೆ ಎಂದು ವರದಿಯಾಗಿದೆ. ಈ ಹಿಂದೆಯೂ ಸಹ ಸ್ಟೀವ್‌ ಹೀಗೇ ಮಹಿಳೆಯೊಬ್ಬರಿಗೆ ಮಾಸ್ಕ್‌ ತೆಗೆದರೆ ಎಂಟು ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದ್ದ.

ಕೊರೋನಾ ಸಾಂಕ್ರಮಿಕದ ಸಂದರ್ಭದಲ್ಲಿ ಜನರಿಗೆ ಸೋಂಕು ಹಾಗೂ ಲಸಿಕೆಗಳ ಕುರಿತಂತೆ ಬಹಳ ತಪ್ಪು ಮಾಹಿತಿಗಳನ್ನು ಈತ ಹಬ್ಬಿಸುತ್ತಿದ್ದ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read