12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಮುತ್ತಿಟ್ಟ ಉರಗ ಪ್ರೇಮಿ; ವಿಡಿಯೋ ವೈರಲ್

Man kisses 12-foot-long king cobra on head in bizarre video. Internet reacts - India Today

ಹಾವುಗಳೆಂದರೆ ಬಹುಪಾಲು ಜನರು ಭಯಭೀತರಾಗುತ್ತಾರೆ. ಆದರೆ, ಕೆಲವರು ಅವುಗಳನ್ನು ಸಾಕಷ್ಟು ಇಷ್ಟಪಡುತ್ತಾರೆ, ಅಲ್ಲದೆ ಸಾಕುಪ್ರಾಣಿಗಳಂತೆ ಸಾಕುತ್ತಾರೆ. ಇತರರು ಅವುಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಒಂದು ವೇಳೆ ನಿಮಗೂ ಹಾವುಗಳೆಂದ್ರೆ ಭಯವಿದ್ದರೆ ಈ ವಿಡಿಯೋ ನೋಡಿದ್ರೆ ಮೈ ಜುಮ್ಮೆನಿಸಬಹುದು.

ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಚುಂಬಿಸಿದ್ದಾನೆ. ಇದು ಅತ್ಯಂತ ವಿಷಕಾರಿ ಸರ್ಪ. ಈ ವಿಡಿಯೋವನ್ನು ನಿಕ್ ದಿ ರಾಂಗ್ಲರ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ವ್ಯಕ್ತಿಯು ಪ್ರಾಣಿಗಳು ಹಾಗೂ ಸರೀಸೃಪ ಪ್ರೇಮಿಯಂತೆ. ಉರಗ ಪ್ರೇಮಿ ನಿಕ್ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಎತ್ತಿ ಹಿಡಿದಿದ್ದಾನೆ. ನಂತರ ಅದರ ತಲೆಗೆ ಮುತ್ತನ್ನಿಟ್ಟಿದ್ದಾನೆ. ಕೆಲವು ಸೆಕೆಂಡುಗಳ ಕಾಲ ಹಾವನ್ನು ತನ್ನ ಕೈಲಿ ಹಿಡಿದು ಕ್ಯಾಮರಾಕ್ಕೆ ಫೋಸ್ ನೀಡಿದ್ದಾನೆ.

ನೀವು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಚುಂಬಿಸುತ್ತೀರಾ? ಎಂದು ವಿಡಿಯೋ ಪೋಸ್ಟ್‌ ಮಾಡಿ ಶೀರ್ಷಿಕೆ ನೀಡಿದ್ದಾನೆ. ಈ ವಿಡಿಯೋ ಇಲ್ಲಿಯವರೆಗೆ 4 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

https://www.youtube.com/watch?v=0JHaQ-A8-6s

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read