ಆಟೋದಲ್ಲಿ ನಿರ್ಮಾಣವಾಯ್ತು ಶಿವಾಜಿ ಮಹಾರಾಜರ ಕೋಟೆ; ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮಗಳಲ್ಲಿ ದಿನನಿತ್ಯ ಅನೇಕ ಮನರಂಜಿಸೋ ವಿಡಿಯೋಗಳು ಇರುತ್ತವೆ. ಅದರಲ್ಲಿ ಕೆಲವು ವಿಶಿಷ್ಟ ವಿಡಿಯೋಗಳು ಕೂಡ ಇರುತ್ತದೆ. ಇದೀಗ ಛತ್ರಪತಿ ಶಿವಾಜಿ ಕೋಟೆಯಾಗಿ ಆಟೋವೊಂದು ರೂಪಾಂತರಗೊಂಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಕೋಟೆಯಾಗಿ ರೂಪಾಂತರಗೊಂಡ ಆಟೋದ ಪಕ್ಕದಲ್ಲಿ ವ್ಯಕ್ತಿಯೊಬ್ಬ ನಿಂತಿರುವ ದೃಶ್ಯವನ್ನು ತೋರಿಸಲಾಗಿದೆ. ನವೀನ ವಿನ್ಯಾಸವನ್ನು ಆಟೋದಲ್ಲಿ ಕಾರ್ಡ್‌ಬೋರ್ಡ್ ತರಹದ ವಸ್ತುಗಳನ್ನು ಬಳಸಿ ಮಾಡಲಾಗಿದ್ದು, ಅದನ್ನು ಕಪ್ಪು ಬಣ್ಣದಿಂದ ಚಿತ್ರಿಸಲಾಗಿದೆ. ಕೋಟೆಯ ವಿನ್ಯಾಸವನ್ನು ವಾಹನದ ಮೇಲ್ಭಾಗದಲ್ಲಿ ಇರಿಸಲಾಗಿದೆ.

ಆಟೋದ ಮುಂಭಾಗದ ನೋಟವು ಶಿವಾಜಿ ಕುದುರೆಯ ಮೇಲೆ ಕುಳಿತಿರುವುದನ್ನು ತೋರಿಸಿದೆ. ಅದರ ಹಿಂಭಾಗದಲ್ಲಿ ಮಹಾರಾಷ್ಟ್ರದ ವೀರರ ಛಾಯಾಚಿತ್ರಗಳನ್ನು ಇಡಲಾಗಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, 43 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜನರು ನವೀನ ವಿನ್ಯಾಸವನ್ನು ಇಷ್ಟಪಟ್ಟಿದ್ದಾರೆ.

ಜನರು ತಮ್ಮ ವಾಹನಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾರ್ಪಡಿಸಲು ಪ್ರಯತ್ನಿಸುತ್ತಿರುವ ಇಂತಹ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. 2017ರಲ್ಲಿ ಇದೇ ರೀತಿ ವೈರಲ್ ಆಗಿದ್ದ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಮಾರುತಿ ಬಲೆನೊ ಕಾರನ್ನು ಮರ್ಸಿಡೆಸ್ ಆಗಿ ಹೇಗೆ ಬದಲಾಯಿಸಿದ್ದ ಎಂದು ತೋರಿಸುತ್ತದೆ. ಇನ್ನೊಬ್ಬ ವ್ಯಕ್ತಿಯೊಬ್ಬ ಸೈಕಲ್ ಅನ್ನು ರಾಯಲ್ ಎನ್ ಫೀಲ್ಡ್ ರೀತಿ ಬದಲಾಯಿಸಿದ ವೈರಲ್ ಆಗಿದ್ದ.

https://youtu.be/ie-4pbPWos4

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read