‘ಮಾನವೀಯತೆ’ ಇನ್ನೂ ಇದೆ ಎಂಬುದನ್ನು ನಿರೂಪಿಸುತ್ತೆ ಬಡ ಬಾಲಕನಿಗೆ ನೆರವಾದ ಈ ‘ವಿಡಿಯೋ’

ಒಂದ್ಕಡೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಮಾನವೀಯತೆಯುಳ್ಳ ಜನರು ಇನ್ನೂ ನಮ್ಮಲ್ಲಿ ಇದ್ದಾರೆ ಎಂಬುದನ್ನು ತೋರಿಸುವ ಸಾಕಷ್ಟು ವಿಡಿಯೋ ವೈರಲ್‌ ಆಗ್ತಿದೆ. ಬೀದಿ ಬದಿಯ ಮಕ್ಕಳಿಗೆ ಸಹಾಯ ಮಾಡುವ ಅನೇಕ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈಗ ಮತ್ತೊಂದು ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ.

ಹುಡುಗನೊಬ್ಬ ಬಸ್‌ ನಿಲ್ದಾಣದ ರೈಲಿಂಗ್‌ ಮೇಲೆ ಕುಳಿತು, ಸೈಕಲ್ ಓಡಿಸುವಂತೆ ಆಟ ಆಡುತ್ತಿದ್ದ. ಆತ ಕಾಲಿಗೆ ಚಪ್ಪಲಿ ಕೂಡ ಹಾಕಿರಲಿಲ್ಲ. ಇದನ್ನು ನೋಡಿದ ವ್ಯಕ್ತಿಯೊಬ್ಬ ಬಾಲಕನಿಗೆ ನೆರವಾಗಿದ್ದಾನೆ.

ಆತನ ಬಳಿ ಹೋಗಿ, ಆತನಿಗೆ ಚಪ್ಪಲಿ ಕೊಡಿಸಿದ್ದಾರೆ. ಅಲ್ಲದೆ ಒಂದು ಸೈಕಲ್‌ ಗಿಫ್ಟ್‌ ಆಗಿ ನೀಡಿದ್ದಾರೆ. ಇದನ್ನು ನೋಡಿದ ಹುಡುಗ ಬಹಳ ಖುಷಿಯಾಗಿದ್ದಾನೆ. ರಸ್ತೆಯಲ್ಲಿ ಸಂತೋಷದಿಂದ ಸೈಕಲ್‌ ಓಡಿಸೋದನ್ನು ನೀವು ವಿಡಿಯೋದ ಕೊನೆಯಲ್ಲಿ ನೋಡ್ಬಹುದು.

ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ನಿಮ್ಮ ಕೆಲಸಕ್ಕೆ ನಮ್ಮ ಮೆಚ್ಚುಗೆ ಇದೆ ಎಂದು ಅನೇಕರು ಬರೆದಿದ್ದಾರೆ. ವಿಶೇಷವೆಂದ್ರೆ ನಟಿ ಪ್ರೀತಿ ಜಿಂಟಾ ಕೂಡ ವಿಡಿಯೋಕ್ಕೆ ಕಮೆಂಟ್‌ ಮಾಡಿದ್ದಾರೆ. ಬಾಲಕನಿಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

https://www.youtube.com/shorts/Nqm9mhdwvdw?feature=share

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read