ಮಗುವನ್ನು ಅದರ ತೊಟ್ಟಿಲಿನಲ್ಲಿ ಕುಳ್ಳರಿಸಿ ಅದನ್ನು ಕಾರಿನ ಮೇಲೆ ಇಟ್ಟು, ತಂದೆಯೊಬ್ಬ ಕಾರನ್ನು ಓಡಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಿನ ಛಾವಣಿಯ ಮೇಲಿರುವ ತೊಟ್ಟಿಲಿನಲ್ಲಿ ತನ್ನ ಮಗುವನ್ನು ಇಟ್ಟು ಅವನು ಮರೆತಂತೆ ತೋರುತ್ತಿದೆ. ಅದನ್ನು ನೋಡಿದ ಜನರು ಭಯಭೀತರಾಗಿ ಕೂಗಾಡಿದ್ದಾರೆ. ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಆದರೆ ವ್ಯಕ್ತಿಗೆ ತಿಳಿದಿಲ್ಲವೆಂದು ತೋರುತ್ತದೆ ಮತ್ತು ಅವನು ಕಾರಿನ ಚಾಲನೆ ಮಾಡುತ್ತಾನೆ. ನಂತರ ಒಬ್ಬ ವ್ಯಕ್ತಿ ಓಡಿ ಬಂದು ಕಾರನ್ನು ನಿಲ್ಲಿಸಿ ಮಗುವನ್ನು ಕೆಳಕ್ಕೆ ಇಳಿಸುತ್ತಾನೆ. ನಂತರ ಅಪ್ಪ ಸಾರಿ ಸಾರಿ ಎಂದು ಅಳುವ ಮುಖದಲ್ಲಿ ಮಗುವನ್ನು ಕಾರಿನ ಒಳಗೆ ಇಡುತ್ತಾನೆ.
ಇದನ್ನು ನೋಡಿದ ನೆಟ್ಟಿಗರು ಇದು ಉದ್ದೇಶಪೂರ್ವಕವಾಗಿ ಮಾಡಿರುವ ವಿಡಿಯೋ ಎಂದಿದ್ದಾರೆ. ಇದು ನಿಜವಾದಂತೆ ತೋರುತ್ತಿಲ್ಲ ಎಂದಿರುವ ನೆಟ್ಟಿಗರು ಆ ತೊಟ್ಟಿಲಿನಲ್ಲಿ ಇರುವ ಮಗು ಕೂಡ ನಿಜವಾದದ್ದಲ್ಲ ಎನ್ನಿಸುತ್ತಿದೆ ಎಂದಿದ್ದಾರೆ. ಆದರೆ ಇನ್ನು ಕೆಲವರು ಇಂಥ ತಂದೆಯರು ಇದ್ದರೂ ಅಚ್ಚರಿಯಿಲ್ಲ ಎಂದಿದ್ದಾರೆ.
https://twitter.com/echonft9/status/1645864913649258503?ref_src=twsrc%5Etfw%7Ctwcamp%5Etweetembed%7Ctwterm%5E1645864913649258503%7Ctwgr%5Eada0c24948cd1309ae44a22e2d566eb07efb75ac%7Ctwcon%5Es1_&ref_url=https%3A%2F%2Fwww.news18.com%2Fbuzz%2Fman-forgets-baby-in-a-pram-on-car-roof-and-starts-driving-users-call-it-a-prank-7534879.html