ಬೆಂಗಳೂರು : ಬೈಕ್ ಚಲಾಯಿಸುತ್ತಾ ಮೊಬೈಲ್ ನಲ್ಲಿ ಐಪಿಎಲ್ ವೀಕ್ಷಣೆ ಮಾಡುತ್ತಿದ್ದ ಸವಾರನಿಗೆ ಪೊಲೀಸರು 1500 ರೂ ದಂಡ ವಿಧಿಸಿದ್ದಾರೆ.
ಏ.2ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಆರ್ಸಿಬಿ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿತ್ತು. ಅದೇ ವೇಳೆ ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಪ್ರಶಾಂತ್ ತನ್ನ ಎಲೆಕ್ಟಿಕ್ ಬೈಕ್ ಚಲಾಸಿಕೊಂಡು ಮೊಬೈಲ್ನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ವಿಡಿಯೋ ಮಾಡಿಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಸಂಚಾರ ಪೊಲೀಸರಿಗೂ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಇದನ್ನು ಗಮನಿಸಿದ ಪೊಲೀಸರು ಪ್ರಶಾಂತ್ನನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ₹1500 ದಂಡ ವಿಧಿಸಿ ವಾರ್ನ್ ಮಾಡಿ ಕಳುಹಿಸಿದ್ದಾರೆ.
ಸಾಂದರ್ಭಿಕ ಚಿತ್ರ