ಫುಟ್‌ಪಾತ್‌ ಮೇಲೆ ಅತಿ ವೇಗದಲ್ಲಿ SUV ಚಾಲನೆ; ಯುವಕ ಅರೆಸ್ಟ್ | Viral Video

ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಆಗಬೇಕೆಂಬ ಮನಃಸ್ಥಿತಿಯಿಂದ ಕೆಲವರು ಕಾನೂನುಗಳನ್ನು ಮುರಿಯಲು ಯತ್ನಿಸುತ್ತಾರೆ. ಅಜಾಗರೂಕ ಚಾಲನೆ ಮತ್ತು ರೀಲ್‌ ಗಾಗಿ ಸ್ಟಂಟ್‌ ತೋರಿಸುವ ಹಲವಾರು ವೀಡಿಯೊಗಳು ಈಗಾಗಲೇ ವೈರಲ್‌ ಆಗಿದ್ದರ ನಡುವೆ, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಫುಟ್‌ಪಾತ್ ಮೇಲೆ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿಯನ್ನು ಅತಿ ವೇಗದಲ್ಲಿ ಓಡಿಸುವ ದೃಶ್ಯ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

X ಹ್ಯಾಂಡಲ್ @tricitytoday ಹಂಚಿಕೊಂಡ ವೀಡಿಯೊದಲ್ಲಿ, ಈ ವ್ಯಕ್ತಿ ತನ್ನ ದುಸ್ಸಾಹಸದಿಂದ ಪಾದಚಾರಿ ಜೀವನವನ್ನು ಅಪಾಯಕ್ಕೆ ಸಿಲುಕಿಸುವುದನ್ನು ಕಾಣಬಹುದು. ಇನ್ನೊಂದು ಕಾರಿನಿಂದ ಈ ವಿಡಿಯೋ ಚಿತ್ರೀಕರಿಸಲಾಗಿದೆ . “ಈ ಥಾರ್, NH-9 ನಲ್ಲಿ ಗಾಜಿಯಾಬಾದ್ ಇಂದಿರಾಪುರಂ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಓಡಿಸುತ್ತಿದ್ದು ರೀಲ್‌ ಮಾಡುವ ಉದ್ದೇಶವೇ ಇದರ ಹಿಂದಿನ ಕಾರಣ” ಎಂದು ಬರೆದಿದ್ದಾರೆ.

ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಕೂಡಲೇ ಘಾಜಿಯಾಬಾದ್ ಪೊಲೀಸರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇಂದಿರಾಪುರಂ ಪೊಲೀಸ್ ಠಾಣೆ ದೂರು ದಾಖಲಿಸಿದ್ದು, ವಾಹನವನ್ನು ವಶಪಡಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಿದೆ.

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read