ಮೆಟ್ರೋದಲ್ಲಿ ಬಂದ ಮನಿಹೀಸ್ಟ್​ ಹಾಗೂ ಮಂಜುಲಿಕಾ: ಪ್ರಯಾಣಿಕರಿಗೆ ಅಚ್ಚರಿ

ನೋಯ್ಡಾದ ಮೆಟ್ರೋದಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಒಂದು ವಿಚಿತ್ರ ಸನ್ನಿವೇಶ ಎದುರಾಯಿತು. ಅದೇನೆಂದರೆ ಮಕ್ಕಳಿಂದ ಹಿಡಿದು ಬಹುತೇಕ ದೊಡ್ಡವರೂ ಇಷ್ಟಪಡುವ ಮನಿ ಹೀಸ್ಟ್ ಪಾತ್ರವನ್ನು ಧರಿಸಿದ ವ್ಯಕ್ತಿಯೊಬ್ಬ ಕಾಣಿಸಿಕೊಂಡು ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದ್ದಾನೆ.

ಮನಿ ಹೀಸ್ಟ್​ ಪಾತ್ರದಂತೆ ಎರಡು ಚೀಲಗಳನ್ನು ತಂದ ಈ ವ್ಯಕ್ತಿ ಮೆಟ್ರೊದಲ್ಲಿ ಅದನ್ನು ನೆಲದ ಮೇಲೆ ಎಸೆದಿದ್ದು ಇದರ ವಿಡಿಯೋ ವೈರಲ್ ಆಗಿದೆ. ಇದೇ ಮೆಟ್ರೊದಲ್ಲಿ ಮಹಿಳೆಯೊಬ್ಬಳು ಮಂಜುಲಿಕಾನಂತೆ ವೇಷ ಧರಿಸಿ ಕುಳಿತಿರುವುದನ್ನೂ ನೋಡಬಹುದು.

ಈಗ ವೈರಲ್ ಆಗಿರುವ ವಿಡಿಯೋವನ್ನು ನಮ್ಮ ಗುರುಗ್ರಾಮ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಕಿರು ಕ್ಲಿಪ್‌ನಲ್ಲಿ, ನೋಯ್ಡಾದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಮನಿ ಹೀಸ್ಟ್ ಪಾತ್ರದಂತೆಯೇ ಸಂಪೂರ್ಣವಾಗಿ ಡ್ರೆಸ್ ಧರಿಸಿ ರೈಲು ಹತ್ತಿದಾಗ ಜನರು ಆಶ್ಚರ್ಯಚಕಿತರಾಗುವುದನ್ನು ನೋಡಬಹುದು. ಮುಖವಾಡದೊಂದಿಗೆ ಕೆಂಪು ಜಂಪ್‌ಸೂಟ್ ಧರಿಸಿದ್ದ ವ್ಯಕ್ತಿ ಅದೇ ಶೈಲಿಯಲ್ಲಿ ನೆಲದ ಮೇಲೆ ಎಸೆದ ಎರಡು ಚೀಲಗಳನ್ನು ಸಹ ಹೊತ್ತಿರುವುದನ್ನು ನೋಡಬಹುದು.

https://www.youtube.com/watch?v=hK4iecnYsAo

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read