ವಿಡಿಯೋ ಮಾಡಲು ಹೇಳಿ ಜಲಪಾತದಿಂದ ಹಾರಿದ ಯುವಕ: ಬಂಡೆಗಳ ನಡುವೆ ತಲೆ ಸಿಲುಕಿದ ಸ್ಥಿತಿಯಲ್ಲಿ ಶವ ಪತ್ತೆ

ಚೆನ್ನೈ ಮೂಲದ 22 ವರ್ಷದ ವಿದ್ಯಾರ್ಥಿ ತಿರುಪತಿ ಬಳಿಯ ತಲಕೋಣ ಜಲಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕರ್ನಾಟಕದ ಮಂಗಳೂರಿನವರಾದ ಸುಮಂತ್ ತಮ್ಮ ಸ್ನೇಹಿತರೊಂದಿಗೆ ವಿಹಾರಕ್ಕೆಂದು ತಲಕೋಣ ಜಲಪಾತಕ್ಕೆ ಬಂದಿದ್ದರು.

ಶುಕ್ರವಾರ ಸುಮಂತ್ ಅವರು ತಲಕೋಣ ಜಲಪಾತದ ಧುಮುಕುತ್ತಿರುವ ವಿಡಿಯೋ ಚಿತ್ರೀಕರಣ ಮಾಡುವಂತೆ ಸ್ನೇಹಿತರನ್ನು ಕೇಳಿಕೊಂಡಿದ್ದರು. ಆದರೆ, ಬಹಳ ಸಮಯದ ನಂತರ ಅವರು ಕಾಣಿಸಿಕೊಂಡಿಲ್ಲ. ಆತಂಕಗೊಂಡ ಆತನ ಸ್ನೇಹಿತರು ಸಮೀಪದ ಪೊಲೀಸ್ ಠಾಣೆ ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಸುಮಂತ್‌ ತಲೆಯು ನೀರಿನ ಅಡಿಯಲ್ಲಿ ಎರಡು ಬಂಡೆಗಳ ನಡುವೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ. ಮೃತದೇಹ ಹೊರತೆಗೆಯಲಾಗಿದೆ. ಸುಮಂತ್ ಚೆನ್ನೈನ ರಾಜೀವ್ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ. ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ತಲಕೋಣ ಜಲಪಾತದಲ್ಲಿ ನಡೆದ ಇಂತಹ ಮೂರನೇ ಘಟನೆ ಇದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read