Shocking Video | ಹೆಜ್ಜೆ ಹಾಕುತ್ತಿದ್ದಾಗಲೇ ಕುಸಿದು ಬಿದ್ದ ಯುವಕ; ನೋಡನೋಡುತ್ತಿದ್ದಂತೆಯೇ ಬಂದೆರಗಿದ ಸಾವು

Youth man dies due to heart attack after falls in ganesh chaturthi function  dancing andhra pradeshಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಮಂಟಪದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆಯು ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಸಂಭವಿಸಿದೆ.

26 ವರ್ಷದ ಪ್ರಸಾದ್​ ಎಂಬ ವ್ಯಕ್ತಿಯು ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿರೋದನ್ನ ಕಾಣಬಹುದಾಗಿದೆ. ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಪ್ರಸಾದ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಆತ ಮೃತಪಟ್ಟಿದ್ದಾನೆ ಅಂತಾ ವೈದ್ಯರು ಘೋಷಿಸಿದ್ದಾರೆ.

ಎಕ್ಸ್​ನಲ್ಲಿ ಈ ಘಟನೆಯ ವಿಡಿಯೋವನ್ನು ಶೇರ್​ ಮಾಡಲಾಗಿದ್ದು ಅನೇಕರು ಪ್ರಸಾದ್​ ಸಾವಿಗೆ ನಿಖರ ಕಾರಣ ಏನಿರಬಹುದು ಎಂಬುದನ್ನು ಕಮೆಂಟ್ ವಿಭಾಗದಲ್ಲಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.

ಅತಿಯಾದ ಮದ್ಯ ಸೇವನೆ ಹಾಗೂ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರಗಳ ಸೇವನೆ ಮಾಡಿದಾಗ ದೇಹದಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯಾಘಾತಕ್ಕೆ ದಾರಿ ಮಾಡಿಕೊಡುತ್ತೆ ಅಂತಾ ಅನೇಕರು ಕಮೆಂಟ್​ನಲ್ಲಿ ಬರೆದಿದ್ದಾರೆ.

ಕರ್ಕಶ ಡಿಜೆ ಸೌಂಡ್​ನಿಂದ ಈ ಹೃದಯಾಘಾತ ಸಂಭವಿಸಿದೆ. ಇದು ಕೋವಿಡ್​ ಲಸಿಕೆಯ ಸೈಡ್​ ಎಫೆಕ್ಟ್​ಗಳ ಪೈಕಿ ಒಂದಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇನ್ಮೇಲೆ ದೊಡ್ಡದಾಗಿ ಡಿಜೆ ಸೌಂಡ್​ ಹಾಕೋದನ್ನ ನಿಲ್ಲಿಸಬೇಕು ಅಂತಾ ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

https://twitter.com/i/status/1704684931312754927

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read