BIG NEWS: ಗಿಳಿ ಸಾಕ್ಷ್ಯದೊಂದಿಗೆ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಆಗ್ರಾ: ಗಿಳಿಯ ಸಾಕ್ಷ್ಯದೊಂದಿಗೆ 2014 ರ ಕೊಲೆಯ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆಗ್ರಾದ ಪ್ರಮುಖ ಪತ್ರಿಕೆಯ ಮುಖ್ಯ ಸಂಪಾದಕ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ ಅವರನ್ನು ಫೆಬ್ರವರಿ 20, 2014 ರಂದು ಅವರ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಕೊಲೆಯ ನಂತರ, ಅವರ ಮನೆಯಲ್ಲಿ ದರೋಡೆ ಮಾಡಲಾಗಿತ್ತು ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಸಾಕು ಗಿಳಿ ಶರ್ಮಾ ಅವರ ಸೋದರಳಿಯನ ಹೆಸರನ್ನು ಕಿರುಚಲು ಪ್ರಾರಂಭಿಸಿತು. ಗಿಳಿಯ ಕೂಗು ಕೇಳಿ ವಿಜಯ್ ಶರ್ಮಾ ಅನುಮಾನಗೊಂಡು ಸೋದರಳಿಯನನ್ನು ವಿಚಾರಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸೋದರಳಿಯ ಆಶು, ತನ್ನ ಸ್ನೇಹಿತ ರೋನಿ ಮಾಸ್ಸಿ ಸಹಾಯದಿಂದ ನೀಲಂನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇಂದು, ಕೊಲೆ ನಡೆದು ಒಂಬತ್ತು ವರ್ಷಗಳ ನಂತರ, ವಿಶೇಷ ನ್ಯಾಯಾಧೀಶ ಮೊಹಮ್ಮದ್ ರಶೀದ್ ಅವರು ಆರೋಪಿಗಳಾದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ವಿಜಯ್ ಶರ್ಮಾ ಫೆಬ್ರವರಿ 20, 2014 ರಂದು ತಮ್ಮ ಮಗ ರಾಜೇಶ್ ಮತ್ತು ಮಗಳು ನಿವೇದಿತಾ ಅವರೊಂದಿಗೆ ಫಿರೋಜಾಬಾದ್‌ನಲ್ಲಿ ಮದುವೆಗೆ ಹೋಗಿದ್ದರು. ನೀಲಂ ಮನೆಯಲ್ಲೇ ಇದ್ದರು. ತಡರಾತ್ರಿ ವಿಜಯ್ ವಾಪಸಾದಾಗ ಪತ್ನಿ ಹಾಗೂ ಸಾಕು ನಾಯಿಯ ಶವ ಕಂಡು ಆಶ್ಚರ್ಯಚಕಿತರಾದರು. ಹರಿತವಾದ ವಸ್ತುವಿನಿಂದ ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಕೆಲ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಮತ್ತೊಂದೆಡೆ ವಿಜಯ್ ಶರ್ಮಾ ಅವರ ಮುದ್ದಿನ ಗಿಳಿ ತಿನ್ನುವುದು, ಕುಡಿಯುವುದನ್ನು ಬಿಟ್ಟಿದೆ. ಕೊಲೆಗೆ ಗಿಳಿಯೇ ಸಾಕ್ಷಿಯಾಗಿರಬಹುದು ಎಂದು ಶರ್ಮಾ ಶಂಕಿಸಿದ್ದಾರೆ. ಅವನು ಗಿಳಿಯ ಮುಂದೆ ಶಂಕಿತರನ್ನು ಒಂದೊಂದಾಗಿ ಹೆಸರಿಸಲು ಪ್ರಾರಂಭಿಸಿದಾಗ, ಪಕ್ಷಿಯು ಆಶು ಹೆಸರು ಹೇಳಿದಾಗ ಗಾಬರಿಗೊಂಡಿದೆ. “ಅಶು-ಅಶು” ಎಂದು ಕಿರುಚಲು ಪ್ರಾರಂಭಿಸಿದೆ. ಪೊಲೀಸರ ಮುಂದೆಯೂ ಗಿಳಿ ಆಶು ಹೆಸರಿಗೆ ಅದೇ ಪ್ರತಿಕ್ರಿಯೆ ನೀಡಿದಾಗ, ಅವನನ್ನು ಬಂಧಿಸಲಾಯಿತು. ಇದನ್ನು ಪೊಲೀಸರು ತನಿಖೆಯ ವೇಳೆಯೂ ತಿಳಿಸಿದ್ದಾರೆ.

ನೀಲಂ ಶರ್ಮಾ ಅವರ ಪುತ್ರಿ ನಿವೇದಿತಾ, ಆಶು ಮನೆಗೆ ಬಂದು ಹೋಗುತ್ತಿದ್ದ. ಹಲವು ವರ್ಷಗಳ ಕಾಲ ಮನೆಯಲ್ಲಿಯೂ ಇದ್ದ. ತಂದೆ ಮನೆಯಲ್ಲಿ ಚಿನ್ನಾಭರಣ ಮತ್ತು ನಗದನ್ನು ಎಲ್ಲೆಲ್ಲಿ ಇಡುತ್ತಿದ್ದರು ಎಂಬುದು ಆಶುಗೆ ತಿಳಿದಿತ್ತು. ಆತನೇ ದರೋಡೆಗೆ ಯೋಜನೆ ರೂಪಿಸಿದ್ದಾನೆ.  ಅವನು ಸಾಕು ನಾಯಿಯನ್ನು ಚಾಕುವಿನಿಂದ ಒಂಬತ್ತು ಬಾರಿ ಮತ್ತು ನೀಲಮ್‌ಗೆ 14 ಬಾರಿ ಇರಿದಿದ್ದಾನೆ, ಅವನ ಏಕೈಕ ಉದ್ದೇಶ ಕೊಲ್ಲುವುದು ಮತ್ತು ಲೂಟಿ ಮಾಡುವುದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಉದ್ದಕ್ಕೂ ಗಿಳಿಯನ್ನು ಉಲ್ಲೇಖಿಸಲಾಗಿದೆ, ಆದರೆ ಸಾಕ್ಷ್ಯಾಧಾರವಾಗಿ ನೀಡಲಾಗಿಲ್ಲ. ಏಕೆಂದರೆ ಪುರಾವೆ ಕಾಯ್ದೆಯು ಅಂತಹ ಯಾವುದೇ ನಿಬಂಧನೆಯನ್ನು ಪರಿಗಣಿಸಲ್ಲ ಎಂದು ಹೇಳಲಲಾಗಿದೆ.

ಘಟನೆ ನಡೆದ ಆರು ತಿಂಗಳ ನಂತರ ಪಕ್ಷಿ ಸಾವನ್ನಪ್ಪಿದೆ ಎಂದು ನಿವೇದಿತಾ ಹೇಳಿದ್ದಾರೆ. ವಿಜಯ್ ಶರ್ಮಾ ನವೆಂಬರ್ 14, 2020 ರಂದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. ನನ್ನ ಪೋಷಕರು ಆಶುವನ್ನು ಗಲ್ಲಿಗೇರಿಸಬೇಕೆಂದು ಬಯಸಿದ್ದರು. ಇಡೀ ಕುಟುಂಬವು ಅವನನ್ನು ಶಿಕ್ಷಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತದೆ ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read