ಮಗಳಿಗೆ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳ; ಕುವೈತ್‌ ನಿಂದ ಬಂದು ಆರೋಪಿ ಕೊಂದ ತಂದೆಯಿಂದ ವಿಡಿಯೋ ಸಂದೇಶ

ಕುವೈತ್‌ನಲ್ಲಿ ಕೆಲಸ ಮಾಡುವ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತನ್ನ ಸ್ವಗ್ರಾಮಕ್ಕೆ ಹೋಗಿ ಅಂಗವಿಕಲ ಸಂಬಂಧಿಯನ್ನು ಕೊಂದು ಅದೇ ದಿನ ಮತ್ತೆ ಕುವೈಟ್‌ಗೆ ವಾಪಾಸ್‌ ತೆರಳಿದ್ದಾರೆ. ಅನ್ನಮಯ್ಯ ಜಿಲ್ಲೆಯ ಓಬುಳವಾರಿಪಲ್ಲೆ ಮಂಡಲದ ಕೊತ್ತಮಂಪೇಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗುರುವಾರದಂದು ಕೊಲೆ ಮಾಡಿದ ಪ್ರಸಾದ್ ಎಂಬ ವ್ಯಕ್ತಿ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದು, ಪೊಲೀಸರು ತಮ್ಮ ಮಗಳ ದೂರಿನ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಈ ಕೃತ್ಯ ಎಸಗಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಆಂಜನೇಯ ಪ್ರಸಾದ್ ಮತ್ತು ಅವರ ಪತ್ನಿ ಚಂದ್ರಕಲಾ ಕುವೈತ್‌ನಲ್ಲಿ ನೆಲೆಸಿದ್ದರೆ, ಅವರ 12 ವರ್ಷದ ಮಗಳು ಚಂದ್ರಕಲಾ ಅವರ ಸಹೋದರಿ ಲಕ್ಷ್ಮಿ ಅವರ ಕುಟುಂಬದ ಜೊತೆ ವಾಸವಾಗಿದ್ದರು. ಲಕ್ಷ್ಮಿ ಅವರ ಮಾವ ಆಂಜನೇಯಲು ತಮ್ಮ ಮಗಳ ಜೊತೆ ಅನುಚಿತವಾಗಿ ವರ್ತಿಸಿದ್ದ ಎಂದು ಪ್ರಸಾದ್‌ ಆರೋಪಿಸಿದ್ದಾರೆ.

ಪ್ರಸಾದ್ ಅವರ ಪತ್ನಿ ಈ ದುರ್ವರ್ತನೆ ಬಗ್ಗೆ ತಿಳಿದಾಗ ಅವರು ತಮ್ಮ ಮಗಳನ್ನು ಕುವೈತ್‌ಗೆ ಕರೆತರಲು ಭಾರತಕ್ಕೆ ಬಂದು ಓಬುಳವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಪೊಲೀಸರು ಪ್ರಸಾದ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಅವರ ಹೇಳಿಕೆಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read