ಕಾಲಯಾನಿ ಎಲ್ವಿಸ್ ಥಾಂಪ್ಸನ್ ಎಂಬವರು 2025ರ ಬಗ್ಗೆ ಕೆಲವು ಬೆಚ್ಚಿಬೀಳಿಸುವ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ತಾನು ಭವಿಷ್ಯದಿಂದ ಬಂದಿರುವುದಾಗಿ ಹೇಳಿಕೊಳ್ಳುವ ಥಾಂಪ್ಸನ್, 2025ರಲ್ಲಿ ಜಗತ್ತು ಹಲವಾರು ವಿನಾಶಕಾರಿ ಘಟನೆಗಳಿಗೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಥಾಂಪ್ಸನ್ 2025ರಲ್ಲಿ ಸಂಭವಿಸಲಿರುವ ಐದು ಪ್ರಮುಖ ಘಟನೆಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಏಪ್ರಿಲ್ 6ರಂದು ಅಮೆರಿಕದ ಒಕ್ಲಹೋಮ ನಗರವನ್ನು ಬೃಹತ್ ಸುಂಟರಗಾಳಿ ನಾಶಪಡಿಸಲಿದೆ. ಮೇ 27ರಂದು ಅಮೆರಿಕದಲ್ಲಿ ಅಂತರ್ಯುದ್ಧ ಪ್ರಾರಂಭವಾಗಲಿದ್ದು, ಇದು ಅಣ್ವಸ್ತ್ರ ಯುದ್ಧಕ್ಕೆ ತಿರುಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 1ರಂದು “ಚಾಂಪಿಯನ್” ಎಂಬ ಅನ್ಯಗ್ರಹ ಜೀವಿ ಭೂಮಿಗೆ ಆಗಮಿಸಲಿದ್ದು, 12,000 ಮಂದಿಯನ್ನು ಬೇರೆ ಗ್ರಹಕ್ಕೆ ಕರೆದೊಯ್ಯಲಿದೆ. ಸೆಪ್ಟೆಂಬರ್ 19ರಂದು ಅಮೆರಿಕದ ಪೂರ್ವ ಕರಾವಳಿಗೆ ಭಾರಿ ಚಂಡಮಾರುತ ಅಪ್ಪಳಿಸಲಿದೆ. ನವೆಂಬರ್ 3ರಂದು ಪೆಸಿಫಿಕ್ ಮಹಾಸಾಗರದಲ್ಲಿ ಬೃಹತ್ ಸಮುದ್ರ ಜೀವಿಯೊಂದು ಪತ್ತೆಯಾಗಲಿದೆ ಎಂದು ಥಾಂಪ್ಸನ್ ಹೇಳಿದ್ದಾರೆ.
ಥಾಂಪ್ಸನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಅನೇಕರು ಈ ಭವಿಷ್ಯವಾಣಿಗಳನ್ನು ನಂಬಲು ಸಿದ್ಧರಿಲ್ಲ. “ಭವಿಷ್ಯದಲ್ಲಿದ್ದಾಗ ಲಾಟರಿ ಟಿಕೆಟ್ ಸಂಖ್ಯೆಗಳನ್ನು ತರಬಹುದಿತ್ತು” ಎಂದು ಹಲವರು ಹಾಸ್ಯ ಮಾಡಿದ್ದಾರೆ. ಮತ್ತೆ ಕೆಲವರು “ಈ ಭವಿಷ್ಯವಾಣಿಗಳು ಸುಳ್ಳಾದರೆ ಥಾಂಪ್ಸನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ” ಎಚ್ಚರಿಸಿದ್ದಾರೆ.
ಥಾಂಪ್ಸನ್ ಅವರ ಈ ಭವಿಷ್ಯವಾಣಿಗಳು ನಿಜವಾಗುತ್ತವೆಯೋ ಇಲ್ಲವೋ ಕಾದು ನೋಡಬೇಕಿದೆ. ಆದರೆ, ಎಲ್ವಿಸ್ ಥಾಂಪ್ಸನ್‌ನ ಹಕ್ಕುಗಳ ಸಿಂಧುತ್ವವನ್ನು ʼಕನ್ನಡ ದುನಿಯಾʼ ಅನುಮೋದಿಸುವುದಿಲ್ಲ ಎಂಬುದನ್ನು ಗಮನಿಸಬೇಕು.