ಆರಾಮಾಗಿ ಸಂಜೆಯ ಆನಂದ ಅನುಭವಿಸ್ತಿದ್ದ ವ್ಯಕ್ತಿಗೆ ಎದುರಾಯ್ತು ಕರಡಿ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಇದ್ದಕ್ಕಿದ್ದಂತೆ ನಿಮಗೆ ಕರಡಿ ಎದುರಾದ್ರೆ ಏನು ಮಾಡ್ತೀರಾ? ಇಂತಹ ಸಂದರ್ಭದಲ್ಲಿ ಭಯದಿಂದ ಗಲಿಬಿಲಿಗೊಂಡು ಓಡಿಹೋಗೋದು ಸಾಮಾನ್ಯ. ಆದರೆ ಉತ್ತರ ಕೆರೊಲಿನಾದ ಆಶೆವಿಲ್ಲೆ ನಿವಾಸಿ ಡೇವಿಡ್ ಒಪೆನ್‌ಹೈಮರ್‌ ಅವರು ಏನ್ ಮಾಡಿದ್ರು ಅನ್ನೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಏಪ್ರಿಲ್ 11 ರ ಸಂಜೆ, ಡೇವಿಡ್ ತನ್ನ ಹಿತ್ತಲಿನಲ್ಲಿ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಸಂಜೆಯ ನೆಮ್ಮದಿಯನ್ನು ಆನಂದಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕರಡಿ ಅವರ ಎದುರು ಬಂದಿತು. ಒಂದು ಕ್ಷಣ ಗಾಬರಿಗೊಂಡ ಡೇವಿಡ್ ಕುರ್ಚಿ ಬಿಟ್ಟು ಅಲುಗಾಡದೇ ಅಲ್ಲೇ ಇದ್ದುಬಿಟ್ಟರು. ಕೆಲವು ಕ್ಷಣಗಳ ಕಾಲ ಡೇವಿಡ್ ಅನ್ನು ದಿಟ್ಟಿಸಿ ನೋಡಿದ ನಂತರ ಕರಡಿ ಬೇಗನೆ ಓಡಿಹೋಯಿತು.

ಇಡೀ ಘಟನೆಯನ್ನು ಡೇವಿಡ್ ಅವರ ಮನೆಯ ಡೋರ್‌ಬೆಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ . ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಕರಡಿಯನ್ನು ಹತ್ತಿರದಿಂದ ನೋಡಿದ ಆಘಾತದ ಹೊರತಾಗಿಯೂ ಡೇವಿಡ್ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಾಣಬಹುದು. ಇದನ್ನ ಅವರು ಫೇಸ್‌ಬುಕ್‌ನಲ್ಲಿ ವೀಡಿಯೊ ಸಮೇತ ಹಂಚಿಕೊಂಡಿದ್ದಾರೆ.

https://www.youtube.com/watch?v=d68W0eBowCA&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read