SHOCKING: ವೈವಾಹಿಕ ಸಂಬಂಧ ತೊರೆದು ಅನ್ಯಕೋಮಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಸೋದರಿ ಶಿರಚ್ಛೇದ

ಭೋಪಾಲ್: ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ವ್ಯಕ್ತಿಯೊಬ್ಬ ತನ್ನ 24 ವರ್ಷದ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಅನ್ಯ ಕೋಮಿನ ಯುವಕನೊಂದಿಗೆ ಸೋದರಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ಕತ್ತಿಯಿಂದ ತಲೆ ಕತ್ತರಿಸಿದ್ದಾನೆ.

ಜಿಲ್ಲೆಯ ಆಡಳಿತ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಬರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿಜಾನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯ ತಂದೆ ಚಂದರ್ ಲಾಲ್, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತನ್ನ ಮಗಳನ್ನು ಕತ್ತಿಯಿಂದ ತನ್ನ ಮಗ ಬಗ್ದು(26) ಕೊಂದಿದ್ದಾನೆ ಎಂದು ಪೊಲೀಸರನ್ನು ಭೇಟಿ ಮಾಡಿ ಅವರು ತಿಳಿಸಿದ್ದಾರೆ. ಇನ್ಸ್‌ ಪೆಕ್ಟರ್ ಅರವಿಂದ್ ಸಿಂಗ್ ರಾಥೋಡ್ ಈ ದುರಂತ ಘಟನೆಯನ್ನು ಖಚಿತಪಡಿಸಿದ್ದಾರೆ. ಕರೆಗೆ ಪೊಲೀಸರು ತ್ವರಿತವಾಗಿ ಸ್ಪಂದಿಸಿದರು. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಮಹಿಳೆ ಮೃತದೇಹ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಸಹೋದರಿ ತನ್ನ ವೈವಾಹಿಕ ಸಂಬಂಧವನ್ನು ತೊರೆದು ಮುಸ್ಲಿಂ ಸಮುದಾಯದ ವ್ಯಕ್ತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ವಾಸಿಸುತ್ತಿದ್ದ ಹಿನ್ನಲೆಯಲ್ಲಿ ಬಗ್ದು ಆಕ್ರೋಶಗೊಂಡಿದ್ದ. ಮಹಿಳೆ ತವರು ಮನೆಗೆ ಬಂದಿದ್ದ ವೇಳೆ ದಾಳಿ ಮಾಡಿ ಕತ್ತಿಯಿಂದ ಶಿರಚ್ಛೇದ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಆಕೆಯ ಕುಟುಂಬಕ್ಕೆ ಒಪ್ಪಿಸಲಾಯಿತು. ಆರೋಪಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read