ಚಿಕ್ಕಮಗಳೂರು: ಹಿಂದೂ ಹೆಸರಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿ ಲಾಡ್ಜ್ ವೊಂದರಲ್ಲಿ ಹಿಂದೂ ಮಹಿಳೆಯ ಜೊತೆಗಿದ್ದ ಅನ್ಯಕೋಮಿನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಘಟನೆ ನಡೆದಿದೆ. ಬಾಳೆಹೊನ್ನೂರು ಮೂಲದ ಅಬ್ದುಲ್ ಸಮದ್(42) ಎಂಬಾತ ರಮೇಶ್ ಹೆಸರಲ್ಲಿ ನಕಲಿ ಐಡಿ ಕಾರ್ಡ್ ನೀಡಿ ಹಿಂದೂ ಮಹಿಳೆಯ ಜೊತೆಗೆ ತಾವು ದಂಪತಿ ಎಂದು ಸುಳ್ಳು ಹೇಳಿ ಲಾಡ್ಜ್ ನಲ್ಲಿ ತಂಗಿದ್ದ.
ಇವರ ಬಗ್ಗೆ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಶೃಂಗೇರಿ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ಐಡಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.