ಮನೆಯಿಂದ ಕೆಲಸ ಮಾಡುವ ವೇಳೆ ಆನ್ಲೈನ್ ಮೀಟಿಂಗ್‌ಗಳ ಸಂದರ್ಭದಲ್ಲಿ ಅಚಾನಕ್ಕಾಗಿ ಉದ್ಭವಿಸುವ ನಗೆಪಾಟಲಿನ ಅನೇಕ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಣದಲ್ಲಿ ವೈರಲ್ ಆಗಿವೆ.
ಕ್ಯಾಮೆರಾ ಆನ್ ಮಾಡಿ ಮೀಟಿಂಗ್ ಮಾಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಮಕ್ಕಳು, ಸಾಕು ಪ್ರಾಣಿಗಳು ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡು ತುಂಟಾಟ ಆಡುವುದು, ದೊಡ್ಡವರು ಗೊತ್ತಿಲ್ಲದಂತೆ ಮೀಟಿಂಗ್ ನಡೆಯುತ್ತಿರುವ ಜಾಗದಲ್ಲಿ ಬಂದು ಹೋಗುವಂಥ ನಿದರ್ಶನಗಳು ಒಮ್ಮೊಮ್ಮೆ ಭಾರೀ ಮಜವಾಗಿರುತ್ತವೆ.
ಆನ್ಲೈನ್‌ನಲ್ಲಿ ಒಳುಡುಪುಗಳನ್ನು ಶಾಪಿಂಗ್ ಮಾಡಲೆಂದು ತೆರೆದ ಟ್ಯಾಬ್ ಅನ್ನು ಕ್ಲೋಸ್ ಮಾಡದೇ ಹಾಗೇ ಕಚೇರಿಯ ಆನ್ಲೈನ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು, ಮೀಟಿಂಗ್ ವೇಳೆ ಏನೋ ಪ್ರೆಸೆಂಟ್ ಮಾಡಲು ಹೋಗಿ ಅಕಸ್ಮಾತ್ ಆಗಿ ಶಾಪಿಂಗ್ ಸೈಟ್ ಇದ್ದ ಟ್ಯಾಬ್ ತೆರೆದುಬಿಟ್ಟಿದ್ದಾರೆ. ಈ ವೇಳೆ ಸ್ಕ್ರೀನ್ ಪ್ರೆಸೆಂಟೇಷನ್ ಆನ್ ಮಾಡಿಕೊಂಡಿದ್ದ ಕಾರಣ ಅದು ಮೀಟಿಂಗ್‌ನಲ್ಲಿದ್ದ ಎಲ್ಲರಿಗೂ ಗೋಚರಿಸಿದೆ. ಇದರಿಂದ ಭಾರೀ ಮುಜುಗರಕ್ಕೀಡಾಗಿದ್ದಾರೆ ಅಮನ್.
ಈ ಫನ್ನಿ ಕ್ಷಣಗಳ ವಿಡಿಯೋವನ್ನು ಅಮನ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ’’ಗಾಯ್ಸ್ ದಯವಿಟ್ಟು ನನಗಾಗಿ ಪ್ರಾರ್ಥಿಸಿ,” ಎಂದು ಕೇಳಿಕೊಂಡಿದ್ದಾರೆ.
https://twitter.com/AmanHasNoName_2/status/1664254354596196354?ref_src=twsrc%5Etfw%7Ctwcamp%5Etweetembed%7Ctwterm%5E1664254354596196354%7Ctwgr%5Ec0b83976f02f8c9cf6986344e3df3dc9d010ad29%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-accidentally-shares-underwear-shopping-site-tab-during-online-office-meet-twitter-in-splits-2388323-2023-06-03
https://twitter.com/AkshayNarisetti/status/1664261335570599936?ref_src=twsrc%5Etfw%7Ctwcamp%5Etweetembed%7Ctwterm%5E1664282236253016064%7Ctwgr%5Ec0b83976f02f8c9cf6986344e3df3dc9d010ad29%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fman-accidentally-shares-underwear-shopping-site-tab-during-online-office-meet-twitter-in-splits-2388323-2023-06-03
https://twitter.com/handyzoilist/status/1664291406188519432?ref_src=twsrc%5Etfw%7Ctwcamp%5Etweetembed%7Ctwterm%5E1664291406188519432%7Ctwgr%5Ec0b83976f02f8c9cf6986344e3df3dc9d010ad29%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-accidentally-shares-underwear-shopping-site-tab-during-online-office-meet-twitter-in-splits-2388323-2023-06-03