ಬಾಗಲಕೋಟೆ: ಬಿಜೆಪಿಯಲ್ಲಿ ಆಂತರಿಕ ಕಲಹ ಹೆಚ್ಚಾಗಿದೆ. ಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರುತ್ತಿದ್ದು, ಕಾಂಗ್ರೆಸ್ ನತ್ತ ಮುಖ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ, ಅವ್ರು ಇಲ್ಲಿಗೆ ಬರ್ತೀನಿ ಅಂದ್ರೆ ಅವರಿಗೆ ಜಾಗವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೇಣುಕಾಚಾರ್ಯ ನಮ್ಮ ಜಿಲ್ಲೆಯವರೇ. ಕಾಂಗ್ರೆಸ್ ಗೆ ಬರುತ್ತೇವೆ ಅಂದ್ರೂ ನಾವು ಕರೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಜಾಗ ಇಲ್ಲಪ್ಪ, ನಮ್ಮ ಜಿಲ್ಲೆಯಲ್ಲಿ ಅವರಿಗೆ ಜಾಗವಿಲ್ಲ. ರೇಣುಕಾಚಾರ್ಯ ಅವರೇ ಕಾಂಗ್ರೆಸ್ ಗೆ ಬರುತ್ತೇನೆ ಎಂದು ಬಂದರೂ ಇಲ್ಲಿ ಜಾಗಬೇಕಲ್ಲ, ಕಾಂಗ್ರೆಸ್ ನಲ್ಲಿ ಜಾಗವಿಲ್ಲ. ಅವರು ಒಮ್ಮೆ ಒಂದು ರೀತಿ, ಮತ್ತೊಮ್ಮೆ ಮತ್ತೊಂದು ರೀತಿ ಮಾತಾಡ್ತಾರೆ ಎಂದು ಗರಂ ಆದರು.
You Might Also Like
TAGGED:mallikarjuana