ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ವನ್ಯ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಅರಣ್ಯ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.
ನಾಪತ್ತೆಯಾಗಿದ್ದ ಆರೋಪಿಯನ್ನು ಕುಟುಂಬದವರೇ ತಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸಿದ್ದರಾಜು ಶರಣಾದ ಆರೋಪಿ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹನೂರು ಬಫರ್ ವಲಯದ ಆನೆ ಕಾರ್ಯ ಪಡೆಯ ಹೊರಗುತ್ತಿಗೆ ನೌಕರ ಸೆ.30ರಂದು ಪಚ್ಚಿದೊಡ್ಡಿ ಗಸ್ತಿಯಲ್ಲಿ ಹುಲಿ ಸತ್ತಿರುವುದನ್ನು ಗಮನಿಸಿದರೂ ಇಲಾಖೆಗೆ ಮಾಹಿತಿ ನೀಡದೇ ಹುಲಿ ಹತ್ಯೆ ಆರೋಪಿಗೆ ಮಾಹಿತಿ ನೀಡಿದ್ದ. ಈ ಮೂಲಕ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ಸಿದ್ದರಾಜು ಮೇಲಿದೆ.