ಪುರುಷರ ಬೋಳು ತಲೆ ಸಮಸ್ಯೆ, ಇಲ್ಲಿದೆ ಕಾರಣ ಮತ್ತು ಪರಿಹಾರ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಹೆಚ್ಚಾಗ್ತಿದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿ ಈ ಸಮಸ್ಯೆಗೆ ಮೂಲಕ ಕಾರಣ. ಪುರುಷರಲ್ಲಿ ಬಹಳ ಬೇಗನೆ ತಲೆಗೂದಲು ಉದುರಿ ಬೋಳಾಗ್ತಿರೋದಕ್ಕೆ ನಿರ್ದಿಷ್ಟ ಕಾರಣಗಳೇನು? ಅದಕ್ಕೆ ಪರಿಹಾರಗಳೇನು ಅನ್ನೋದನ್ನು ನೋಡೋಣ.

ಸಂಶೋಧನೆಯ ಪ್ರಕಾರ ಪುರುಷರಲ್ಲಿ ಕೂದಲು ಉದುರುವಿಕೆಗೆ ಪ್ರಮುಖ ಕಾರಣವೆಂದರೆ ಈಸ್ಟ್ರೊಜೆನಿಕ್ ಅಲೋಪೆಸಿಯಾ. ಇದು ಪುರುಷರಲ್ಲಿ ಕಂಡುಬರುವ DTH ಹಾರ್ಮೋನ್ (ಡೈಹೈಡ್ರೊಟೆಸ್ಟೋಸ್ಟೆರಾನ್) ಅಸಮತೋಲನದಿಂದ ಉಂಟಾಗುತ್ತದೆ. ಈ ಸಂದರ್ಭದಲ್ಲಿ, ಪುರುಷರ ತಲೆಯ ಒಂದು ಭಾಗದಿಂದ ಕೂದಲು ವೇಗವಾಗಿ ಹೊರಬರಲು ಪ್ರಾರಂಭಿಸುತ್ತದೆ. 30 ಪ್ರತಿಶತ ಪುರುಷರಲ್ಲಿ, ಈ ಸಮಸ್ಯೆಯು 30ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ.

ಇದಲ್ಲದೆ ತಲೆ ಅಥವಾ ದೇಹದ ಮೇಲೆ ಕೂದಲು ಬೆಳೆಯಲು ಕಾರಣ ಹಾರ್ಮೋನ್‌ ಎನ್ನುತ್ತದೆ ವೈದ್ಯಲೋಕ. ಗಂಡಸರಲ್ಲಿ ಕೂದಲು ಉದುರುವುದಕ್ಕೆ ಕೂಡ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಮುಖ್ಯ ಕಾರಣ ಎಂಬುದು ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಕೂದಲು ಉದುರುವುದಕ್ಕೆ ಆನುವಂಶಿಕ ಕಾರಣವೂ ಇದೆ.

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ನೆತ್ತಿ ಬೋಳಾಗಿದ್ದರೆ ನಿಮಗೂ ಅದೇ ರೀತಿ ಆಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗೆ ಪರಿಹಾರವೆಂದರೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು. ಜೊತೆಗೆ ಉತ್ತಮ ಆಹಾರಗಳನ್ನೇ ಸೇವಿಸುವುದು. ಇದರ ಜೊತೆಜೊತೆಗೆ ಕೂದಲು ಉದುರಲು ಆರಂಭಿಸಿದೆ ಎನಿಸಿದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read