ತನ್ನದೇ ಫ್ಲಾಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಶವ ಪತ್ತೆ

ಮಲಯಾಳಂ ನಟಿ ರೆಂಜೂಷಾ ಮೆನನ್ ಅವರು ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಲವು ಧಾರಾವಾಹಿ-ಚಲನಚಿತ್ರಗಳಲ್ಲಿ ನಟಿಸಿದ್ದ ನಟಿ ರೆಂಜೂಷಾ ಮೆನನ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ರೆಂಜೂಷಾ ಮತ್ತು ಅವರ ಪತಿ ಕಳೆದ ಕೆಲವು ವರ್ಷಗಳಿಂದ ಶ್ರೀಕಾರ್ಯಂ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ರೆಂಜೂಷಾ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.

ಮಲಯಾಳಂ ಕಿರುತೆರೆ ಧಾರಾವಾಹಿಗಳಿಂದ ಬೆಳ್ಳಿತೆರೆಗೆ ಬಂದಿದ್ದ ರಂಜುಷಾ ಮೆನನ್, ನಿಜಾಲಟ್ಟಂ, ಮಗಳುದೆ ಅಮ್ಮ, ಬಾಲಾಮಣಿ ಮತ್ತು ಪ್ರಸ್ತುತ ಪ್ರಸಾರವಾಗುತ್ತಿರುವ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ರಂಜುಷಾ ಅವರು ತಾಳಪ್ಪಾವ್, ಬಾಂಬೆ ಮಾರ್ಚ್ 12, ಲಿಸಮ್ಮಯುಡೆ ವೀಡು, ಒನ್ ವೇ ಟಿಕೆಟ್, ಕ್ಲಾಸ್‌ಮೇಟ್ಸ್, ಮರಿಕೊಂಡೋರು ಕುಂಜಾಡು ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತಮ ನೃತ್ಯಗಾರ್ತಿಯೂ ಆಗಿರುವ ರಂಜುಷಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಭರತನಾಟ್ಯದಲ್ಲಿ ಪದವಿಯನ್ನೂ ಪಡೆದಿದ್ದಾರೆ. ಸೆಲೆಬ್ರಿಟಿಗಳ ಅಡುಗೆ ಕಾರ್ಯಕ್ರಮ ಸೆಲೆಬ್ರಿಟಿ ಕಿಚನ್ ಮ್ಯಾಜಿಕ್ ಕಾರ್ಯಕ್ರಮದಲ್ಲೂ ರೆಂಜೂಷಾ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read