ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ: ನಟ ನಿವಿನ್ ಪಾಲಿ ವಿರುದ್ಧ ರೇಪ್ ಕೇಸ್ ದಾಖಲು

ಕೊಚ್ಚಿ: ದುಬೈನಲ್ಲಿ ಒಂದು ವರ್ಷದ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಮಲಯಾಳಂ ಚಲನಚಿತ್ರ ನಟ ನಿವಿನ್ ಪೌಲಿ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿದೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಮಂಗಳವಾರ ಊನ್ನುಕಲ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸಲಾಗಿದೆ.

ಪ್ರಕರಣದಲ್ಲಿ ನಿವಿನ್ ಪೌಲಿಯನ್ನು ಆರನೇ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಮೊದಲ ಆರೋಪಿಯಾಗಿ ಪಟ್ಟಿ ಮಾಡಲಾದ ಮಹಿಳೆ ಸೇರಿದಂತೆ ಆರು ಆರೋಪಿಗಳನ್ನು ಒಳಗೊಂಡಿದೆ. ಘಟನೆಯು ದುಬೈನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿಯ ಬಿಡುಗಡೆಯ ನಂತರ ಹಲವಾರು ನಟರು ಮತ್ತು ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಕೇಳಿ ಬಂದಿದೆ. ವಿವಾದದ ನಡುವೆ ಈ ಬೆಳವಣಿಗೆಯು ಬಂದಿದೆ.

ನಿವಿನ್ ಪೌಲಿ ಇದೀಗ ಗಂಭೀರ ಕಾನೂನು ಪರಿಶೀಲನೆಯನ್ನು ಎದುರಿಸುತ್ತಿದ್ದು, ಆರೋಪಗಳ ತನಿಖೆ ಮುಂದುವರೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read