ದೇಶ ವಿರೋಧಿ ಹೇಳಿಕೆ ಆರೋಪದಲ್ಲಿ ಮಲಯಾಳಂ ಕಿರುತೆರೆಯ ಖ್ಯಾತ ನಟ ಅಖಿಲ್ ಮಾರಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಖಿಲ್ ಮಾರಾರ್ ವಿರುದ್ಧ ಕೇರಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 152 ಅಡಿಯಲ್ಲಿ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಟ ಅಖಿಲ್ ಮಾರಾರ್ ಪೋಸ್ಟ್ ಬಗ್ಗೆ ಕೊಟ್ಟಾರಕ್ಕರದ ಸ್ಥಳೀಯ ಬಿಜೆಪಿ ನಾಯಕ ಅನೀಶ್ ಕಿಜಕ್ಕೆಕ್ಕರ ದೂರು ನೀಡಿದ್ದರು.