Viral Video: ಮೇಕಪ್‌ ಕಲಾವಿದೆ ಕೈ ಚಳಕ; ಮಾಡೆಲ್‌ ಆಗಿ ಬದಲಾದ ಮಡಕೆ ಮಾರಾಟಗಾರ್ತಿ…!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹೃದಯಸ್ಪರ್ಶಿ ವೀಡಿಯೊದಲ್ಲಿ, ಪ್ರಸಿದ್ಧ ಮೇಕಪ್ ಕಲಾವಿದೆ ಮಹಿಮಾ ಬಜಾಜ್, ರಸ್ತೆಬದಿಯ ಮಣ್ಣಿನ ಮಡಕೆ ಮಾರಾಟ ಮಾಡುವ ಯುವತಿಯನ್ನು ಫ್ಯಾಷನ್ ಮಾಡೆಲ್ ಆಗಿ ಪರಿವರ್ತಿಸುವುದನ್ನು ನೋಡಬಹುದಾಗಿದೆ.

ಮಹಿಮಾ ಬಜಾಜ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮೇಕಪ್ ಟ್ರಾನ್ಸ್‌ಫಾರ್ಮೇಶನ್ ರೀಲ್ ಅನ್ನು ಅಪ್‌ಲೋಡ್ ಮಾಡಿದ್ದು, ನೆಟಿಜನ್‌ಗಳ ಗಮನ ಸೆಳೆದಿರುವುದಲ್ಲದೆ ಅವರ ಈ ಕಾರ್ಯಕ್ಕೆಪ್ರಶಂಸೆಗಳ ಸುರಿಮಳೆ ಹರಿದುಬಂದಿದೆ.

ಅವರ ಇತ್ತೀಚಿನ ಈ ರೀಲ್‌ ನಲ್ಲಿ, ಮಹಿಮಾ ಅವರು ಸರಳ ಉಡುಪಿನಲ್ಲಿದ್ದ ಮಡಕೆ ಮಾರಾಟಗಾರ್ತಿಯನ್ನು ಹೇಗೆ ಮನಮೋಹಕ ಫ್ಯಾಷನ್ ಮಾಡೆಲ್ ಆಗಿ ಪರಿವರ್ತಿಸಿದರು ಎಂಬುದನ್ನು ನೋಡಬಹುದಾಗಿದೆ. ತಮ್ಮ ಕಲಾತ್ಮಕ ಮೇಕ್ಅಪ್ ತಂತ್ರಗಳನ್ನು ವಿವರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read