ಮಣ್ಣಿನಿಂದ ನೀವು ಸುಲಭವಾಗಿ ಗಣೇಶನ ಮೂರ್ತಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕೆ ಬೇಕಾದ ಜೇಡಿಮಣ್ಣನ್ನು ನೀವು ಕುಂಬಾರರಿಂದ ಖರೀದಿ ಮಾಡಬಹುದು.
ನಿಮಗೆ ಗಣಪತಿ ಮೂರ್ತಿಗೆ ಸರಿಯಾಗಿ ಶೇಪ್ ಕೊಡಲು ಬರುವುದಿಲ್ಲ ಎಂದರೂ ಚಿಂತೆ ಬೇಡ. ಅಂಗಡಿಗಳಲ್ಲಿ ಗಣೇಶನ ಅಚ್ಚುಗಳು ಸಹ ಲಭ್ಯವಿದೆ. ಇದರೊಳಗೆ ಮಣ್ಣನ್ನು ಹಾಕಿ ಪರಿಸರ ಸ್ನೇಹಿ ಗಣಪನನ್ನು ನೀವೇ ತಯಾರಿಸಬಹುದು.
ಹಳೆಯ ನ್ಯೂಸ್ ಪೇಪರ್ನಿಂದಲೂ ನೀವು ಗಣೇಶನ ಮೂರ್ತಿ ತಯಾರಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ. ಹಳೆಯ ನ್ಯೂಸ್ ಪೇಪರ್ಗಳನ್ನು ನೀರಿನಲ್ಲಿ ಒಂದು ದಿನ ಅದ್ದಿಡಿ. ಬಳಿಕ ಈ ಪೇಪರ್ ಮುದ್ದೆಯನ್ನು ಫೆವಿಕೋಲ್ ಸಹಾಯದಿಂದ ಗಣೇಶನ ಮೂರ್ತಿ ತಯಾರಿಸಬಹುದು. ಇದಕ್ಕಾಗಿ ನೀವು ಯುಟ್ಯೂಬ್ಗಳಲ್ಲಿ ಗೈಡ್ ವಿಡಿಯೋಗಳನ್ನೂ ನೋಡಬಹುದಾಗಿದೆ.
ನೀವು ತಯಾರಿಸುವ ಗಣಪನ ಮೂರ್ತಿಗೆ ಬೇಕಾದ ಮಣ್ಣನ್ನು ರೆಡಿ ಮಾಡಿಕೊಳ್ಳುವಾಗ ಅದರೊಳಗೆ ಧಾನ್ಯಗಳನ್ನು ಮಿಕ್ಸ್ ಮಾಡಿ. ಇದರಿಂದ ನೀವು ಗಣಪನ ಮೂರ್ತಿಯನ್ನು ಮುಳುಗಿಸಿದ ಬಳಿಕ ಆ ಧಾನ್ಯಗಳು ನೀರಿನೊಳಗೆ ಸೇರಿ ಹೊಸ ಗಿಡ ಚಿಗುರಲಿದೆ.
ಮಾರ್ಕೆಟ್ಗಳಲ್ಲಿ ಸಿಗುವ ಕಲರ್ ಕಲರ್ ಬಣ್ಣದ ಮುದ್ದೆಗಳನ್ನ ಬಳಕೆ ಮಾಡಿಕೊಂಡೂ ಸಹ ನೀವು ಚಂದ ಚಂದದ ಕಲರ್ಫುಲ್ ಗಣಪನನ್ನು ಮಾಡಬಹುದಾಗಿದೆ.