ಸ್ಟಡಿ ರೂಂನಲ್ಲಿ ವಾಸ್ತು ಅನುಸಾರ ಮಾಡಿ ಈ ಬದಲಾವಣೆ

ಪರೀಕ್ಷೆ ಬಂದ್ರೆ ಮಕ್ಕಳೊಂದೇ ಅಲ್ಲ ಪೋಷಕರೂ ತಲೆ ಬಿಸಿ ಮಾಡಿಕೊಳ್ತಾರೆ. ಪಾಲಕರು ಫಲಿತಾಂಶ ಚೆನ್ನಾಗಿ ಬರಬೇಕೆಂದು ಮಕ್ಕಳಿಗೆ ಓದು ಓದು ಎನ್ನುತ್ತಾರೆ. ಇದು ಮಕ್ಕಳನ್ನು ಒತ್ತಡಕ್ಕೆ ನೂಕುತ್ತದೆ.

ಓದಿದ್ದೆಲ್ಲ ಪರೀಕ್ಷೆಯಲ್ಲಿ ಮರೆತು ಹೋಗುತ್ತದೆ. ಮತ್ತೆ ಕೆಲ ಮಕ್ಕಳಿಗೆ ಓದಿನ ಬಗ್ಗೆ ಹೆಚ್ಚು ಗಮನವಿರುವುದಿಲ್ಲ. ಇದಕ್ಕೆಲ್ಲ ಮಕ್ಕಳು ಓದಲು ಕುಳಿತುಕೊಳ್ಳುವ ಸ್ಥಳ ಕೂಡ ಪ್ರಭಾವ ಬೀರುತ್ತದೆ. ಮಕ್ಕಳ ಸ್ಟಡಿ ರೂಂ ವಾಸ್ತು ಮಕ್ಕಳ ಓದಿನ ಮೇಲೆ ಪ್ರಭಾವ ಬೀರುತ್ತದೆ.

ಮಕ್ಕಳು ಅಭ್ಯಾಸ ಮಾಡುವ ಸ್ಥಳ ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿ ಏಕಾಗ್ರತೆ ಹೆಚ್ಚುವ ಜೊತೆಗೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ.

ಮಕ್ಕಳು ಓದಲು ಬಳಸುವ ಟೇಬಲ್ ಚೌಕಾಕಾರವಾಗಿರಬೇಕು.

ಅಧ್ಯಯನದ ರೂಂನಲ್ಲಿ ಕನ್ನಡಿಯಿರಬಾರದು. ಇದು ಮಕ್ಕಳ ಏಕಾಗ್ರತೆಯನ್ನು ಕಸಿದುಕೊಳ್ಳುತ್ತದೆ.

ಓದುವ ಟೇಬಲ್ ಮನೆಯ ಬಾಗಿಲಿನ ಮುಂದೆ ಇರಬಾರದು. ಇದು ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.

ಓದುವ ಕೋಣೆಯಲ್ಲಿ ನೈಸರ್ಗಿಕ ಬೆಳಕು ಇರಬೇಕು. ಗಾಳಿ ಮತ್ತು ಬೆಳಕು ಸಾಕಷ್ಟಿರುವ ರೂಂನಲ್ಲಿ ಮಕ್ಕಳು ಅಭ್ಯಾಸ ಮಾಡಬೇಕು.

ವಾಸ್ತು ಶಾಸ್ತ್ರದ ಪ್ರಕಾರ ಓದುವ ಸ್ಥಳದಲ್ಲಿ ಸ್ಟಡಿ ದೀಪವಿರಬೇಕು. ಈ ದೀಪದಲ್ಲಿ ಓದಿದ್ರೆ ಗಮನ ಪುಸ್ತಕದ ಮೇಲೆ ಮಾತ್ರ ಇರುತ್ತದೆ.

ಸ್ಟಡಿ ರೂಂನಲ್ಲಿ ಶೌಚಾಲಯವಿರಬಾರದು. ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿರುವ ಸ್ಟಡಿ ರೂಂ ಒತ್ತಡಕ್ಕೆ ಕಾರಣವಾಗುತ್ತದೆ.

ಅಧ್ಯಯನ ನಡೆಸುವ ರೂಂ ಗೋಡೆ ಬಣ್ಣ ಗಾಢವಾಗಿರಬಾರದು. ಬಿಳಿ, ಕಂದು ಬಣ್ಣದ ಗೋಡೆ ಒಳ್ಳೆಯದು.

ಅಧ್ಯಯನದ ರೂಂನಲ್ಲಿ ಪ್ರಾಣಿ-ಪಕ್ಷಿಗಳ ಫೋಟೋ ಇಡಬಾರದು. ಹಾಗೆ ಚಪ್ಪಲಿ, ಶೂ ಹಾಕಿಕೊಂಡು ಅಧ್ಯಯನ ನಡೆಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read